ಮಂಡ್ಯ ಲೋಕಸಭೆ : ಬಿಜೆಪಿಯಿಂದ ಡಾ. ಸಿದ್ದರಾಮಯ್ಯ ಕಣಕ್ಕೆ

By Web DeskFirst Published Oct 11, 2018, 8:17 PM IST
Highlights

ಶ್ರೀರಂಗಪಟ್ಟಣ ತಾಲೂಕಿನ ಕೊತ್ತತ್ತಿ ಹೋಬಳಿಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಹಿಂದೆ ಸರಿದಿದ್ದರು. 

ಮಂಡ್ಯ[ಅ.11]: ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಬಿಜೆಪಿಯಿಂದ ಮಾಜಿ ಕೆಎಎಸ್ ಅಧಿಕಾರಿ ಡಾ. ಸಿದ್ದರಾಮಯ್ಯ ಕಣಕ್ಕಿಳಿಯಲಿದ್ದಾರೆ. 

ಮಂಡ್ಯದ ಮಾಜಿ ಶಾಸಕ ದೊಡ್ಡಬೋರಯ್ಯ ಅವರ ಪುತ್ರರಾಗಿರುವ ಸಿದ್ದರಾಮಯ್ಯ ಅವರು ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ. ಇತ್ತೀಚೆಗಷ್ಟೆ ನಿವೃತ್ತಿ ಪಡೆದಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೊತ್ತತ್ತಿ ಹೋಬಳಿಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಹಿಂದೆ ಸರಿದಿದ್ದರು. 

ಬಿಜೆಪಿ ಸೇರಿದ 5 ನಿಮಿಷದಲ್ಲಿ ಮಂಡ್ಯದ ಲೋಕಸಭೆ ಉಪಚುನಾವಣೆಯ ಅಭ್ಯರ್ಥಿಯಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಹೆಚ್ಚು ಉತ್ಸುಕರಾಗಿದ್ದಾರೆ.

click me!