ಕನ್ನಡತಿ ಮಹಾರಾಷ್ಟ್ರದ ಥಾಣೆಯ ಮೇಯರ್

Published : Mar 08, 2017, 03:18 PM ISTUpdated : Apr 11, 2018, 01:08 PM IST
ಕನ್ನಡತಿ ಮಹಾರಾಷ್ಟ್ರದ ಥಾಣೆಯ ಮೇಯರ್

ಸಾರಾಂಶ

ಥಾಣೆಯ ಒಟ್ಟು 131 ವಾರ್ಡ್'ಗಳಿರುವ ಮಹಾನಗರ ಪಾಲಿಕೆಯಲ್ಲಿ  ಶಿವಸೇನೆ 67, ಎನ್'ಸಿಪಿ 34 ಹಾಗೂ ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತೀಚಿಗೆ ನಡೆದಿದ್ದ  ಐವರು ಸ್ಪರ್ಧಿಸಿದ್ದ ಮನೋರಮ ವಾರ್ಡ್'ನಲ್ಲಿ ಮೀನಾಕ್ಷಿ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.

ಮುಂಬೈ(ಮಾ.08):  ಕನ್ನಡತಿಯೊಬ್ಬರು ಮಹಾರಾಷ್ಟ್ರದ ಥಾಣೆ ಪುರಸಭೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಉಡುಪಿ ಮೂಲದ ಮೀನಾಕ್ಷಿ  ಶಿವಸೇನೆ ಪಕ್ಷದಿಂದ ಥಾಣೆಯ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಥಾಣೆಯ ಮನೋರಮ ನಗರದ ಮಾನ್ವಾಡ ವಾರ್ಡ್'ನಿಂದ ಸತತ 3 ಬಾರಿ ಗೆಲುವು ಸಾಧಿಸಿದ್ದರು.

ಥಾಣೆಯ ಒಟ್ಟು 131 ವಾರ್ಡ್'ಗಳಿರುವ ಮಹಾನಗರ ಪಾಲಿಕೆಯಲ್ಲಿ  ಶಿವಸೇನೆ 67, ಎನ್'ಸಿಪಿ 34 ಹಾಗೂ ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತೀಚಿಗೆ ನಡೆದಿದ್ದ  ಐವರು ಸ್ಪರ್ಧಿಸಿದ್ದ ಮನೋರಮ ವಾರ್ಡ್'ನಲ್ಲಿ ಮೀನಾಕ್ಷಿ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.

ಉಡುಪಿ ಮೂಲದ ಮೀನಾಕ್ಷಿ ಬಹಳ ವರ್ಷಗಳ ಹಿಂದೆಯೇ ಮುಂಬೈಗೆ ವಲಸೆ ಹೋಗಿ ಅಲ್ಲಿನ ಸ್ಥಳೀಯ ರಾಜೇಂದ್ರ ಶಿಂಧೆ ಎಂಬುವವರನ್ನು ವಿವಾಹವಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್