ಹೆಂಡತಿಗೆ ಮೋಸ ಮಾಡುತ್ತಿದ್ದ ಪತಿರಾಯಯನ ಪುರಾಣ ಬಿಚ್ಚಿಟ್ಟ ಉಬರ್ ಆ್ಯಪ್!

By Suvarna Web DeskFirst Published Feb 10, 2017, 9:34 AM IST
Highlights

ಬಹಳಷ್ಟು ಬಾರಿ ತಂತ್ರಜ್ಞಾನ ನಮಗೆ ಅನುಕೂಲಕರವಾಗುದಕ್ಕಿಂತ ಹೆಚ್ಚು ತಲೆನೋವು ತಂದೊಡ್ಡುತ್ತದೆ. ಉಬರ್'ನಲ್ಲಿ ಆ್ಯಪ್'ನಲ್ಲಿದ್ದ ನ್ಯೂನ್ಯತೆ ಈಗ ವ್ಯಕ್ತಿಯೊಬ್ಬನನ್ನು ಆತನ ಪತ್ನಿಯಿಂದ ದೂರ ಮಾಡಿದೆ.  

ಫ್ರಾನ್ಸ್(ಫೆ.10): ಬಹಳಷ್ಟು ಬಾರಿ ತಂತ್ರಜ್ಞಾನ ನಮಗೆ ಅನುಕೂಲಕರವಾಗುದಕ್ಕಿಂತ ಹೆಚ್ಚು ತಲೆನೋವು ತಂದೊಡ್ಡುತ್ತದೆ. ಉಬರ್'ನಲ್ಲಿ ಆ್ಯಪ್'ನಲ್ಲಿದ್ದ ನ್ಯೂನ್ಯತೆ ಈಗ ವ್ಯಕ್ತಿಯೊಬ್ಬನನ್ನು ಆತನ ಪತ್ನಿಯಿಂದ ದೂರ ಮಾಡಿದೆ.  

ಈ ಘಟನೆ ಫ್ರೆಂಚ್ ಉದ್ಯಮಿಯೊಬ್ಬನೊಂದಿಗೆ ನಡೆದಿದೆ. ಉಬರ್ ಆ್ಯಪ್'ನ ನ್ಯೂನ್ಯತೆಯಿಂದಾಗಿ ಉದ್ಯಮಿಗೆ ಇತರ ಮಹಿಳೆಯರೊಂದಿಗೆ ಸಂಬಂಧವಿರುವ ವಿಚಾರ ಪತ್ನಿಗೆ ತಿಳಿದಿದೆ, ನೊಂದ ಪತ್ನಿ ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಾಳೆ. ಇದರಿಂದ ಕುಪಿತಗೊಂಡ ಪತಿರಾಯ ಈಗ ಉಬರ್ ವಿರುದ್ಧ ದೂರು ನೀಡಿ, 40 ಮಿಲಿಯನ್ ಪೌಂಡ್ ಅಂದರೆ 34 ಕೋಟಿ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾನೆ.

'ಉಬರ್ನಿಂದಾಗಿ ನನ್ನ ಪತ್ನಿ ನನ್ನಿಂದ ದೂರ ಹೋಗಿದ್ದಾಳೆ' ಎಂಬುವುದು ಉದ್ಯಮಿಯ ಆರೋಪವಾಗಿದೆ. ದಕ್ಷಿಣ ಫ್ರಾನ್ಸ್'ನಲ್ಲಿ ವಾಸವಿರುವ ಈ ಉದ್ಯಮಿ 'ುಬರ್ ಆ್ಯಪ್'ನಲ್ಲಿ ಯಾವುದೋ ದೋಷವಿದೆ, ನಾನು ಟ್ರಿಪ್'ಗೆಂದು ಹೊರಗೆ ಹೋಗತ್ತಿದ್ದಾಗೆಲ್ಲ ಹೆಂಡತಿಯ ಮೊಬೈಲ್'ಗೆ ನೋಟಿಫಿಕೇಷನ್ ಹೋಗುತ್ತಿತ್ತು. ಇದರಿಂದಾಗಿ ನನಗೆ ಇತರ ಮಹಿಳೆಯರೊಂದಿಗೆ ಸಂಬಂಧವಿದೆ ಎಂನಬ ಅನುಮಾನ ನನ್ನ ಪತ್ನಿಗೆ ಮೂಡಿತ್ತು' ಎಂದಿದ್ದಾರೆ.

'ಒಂದು ಬಾರಿ ಪತ್ನಿಯ ಮೊಬೈಲ್ ನೋಡಿದ್ದೆ, ಈ ಸಂದರ್ಭದಲ್ಲಿ ಆಕೆ ಉಬರ್ ಡಿವೈಸ್'ಗೆ ಲಾಗಿನ್ ಆದ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆದರೆ ಅದೇ ಕ್ಷಣದಲ್ಲಿ ನಾನು ಲಾಗ್ ಔಟ್ ಮಾಡಿದ್ದೆ. ಹೀಗಿದ್ದರೂ ನಾನು ಹೊರಗೆ ಹೋಗುತ್ತಿದ್ದ ವೇಳೆ ಆಕೆಗೆ ನೋಟಿಫಿಕೇಷನ್ ಹೋಗುತ್ತಿತ್ತು' ಎಂದೂ ಅವರು ಆರೋಪಿಸಿದ್ದಾರೆ.

ಸದ್ಯ ಪತಿ ಮೇಲೆ ಅನುಮಾನಪಟ್ಟುಕೊಂಡಿರುವ ಪತ್ನಿ ವಿಚ್ಛೇದನ ನೀಡಿದ್ದಾಳೆ ಆದರೆ ಉಬರ್ ಮುಖ್ಯಸ್ಥರು ಮಾತ್ರ 'ಇಂತಹ ವೈಯುಕ್ತಿಕ ವಿಚಾರಗಳ ಕುರಿತು ಉಬರ್ ಯಾವತ್ತೂ ಸಾರ್ವಜನಿಕ ಹೇಳಿಕೆ ನೀಡಲು ಇಷ್ಟಪಡುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

click me!