ನನ್ನ ಜೈಲಿಗೆ ಕಳಿಸಲು ನಿಮ್ಮಪ್ಪನಾಣೆಗೂ ಸಾಧ್ಯವಿಲ್ಲ: ಸಿಎಂ ಅಪಹಾಸ್ಯ

Published : Nov 05, 2017, 05:16 PM ISTUpdated : Apr 11, 2018, 12:42 PM IST
ನನ್ನ ಜೈಲಿಗೆ ಕಳಿಸಲು ನಿಮ್ಮಪ್ಪನಾಣೆಗೂ  ಸಾಧ್ಯವಿಲ್ಲ: ಸಿಎಂ ಅಪಹಾಸ್ಯ

ಸಾರಾಂಶ

ನಾವು ಬಿಜೆಪಿಯವರ ಹಾಗೆ ಜಾತಿ,  ಧರ್ಮಗಳ ನಡುವೆ ಸಂಘರ್ಷ ಏರ್ಪಡಿಸುವುದಿಲ್ಲ.  ಜಾತಿ ಜಾತಿಗಳ ಮಧ್ಯ  ಬೆಂಕಿ ಹಚ್ಚುವ ಹಿಂದುತ್ವದ ಕೋಮುವಾದಿಗಳು ಪರಿವರ್ತನೆಯಾಗಬೇಕಿದೆ ಎಂದು ಸಭಾಪತಿ ಕೊಳಿವಾಡರ 74 ನೇ ಹುಟ್ಟುಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹಾವೇರಿ (ನ.05): ನಾವು ಬಿಜೆಪಿಯವರ ಹಾಗೆ ಜಾತಿ,  ಧರ್ಮಗಳ ನಡುವೆ ಸಂಘರ್ಷ ಏರ್ಪಡಿಸುವುದಿಲ್ಲ.  ಜಾತಿ ಜಾತಿಗಳ ಮಧ್ಯ  ಬೆಂಕಿ ಹಚ್ಚುವ ಹಿಂದುತ್ವದ ಕೋಮುವಾದಿಗಳು ಪರಿವರ್ತನೆಯಾಗಬೇಕಿದೆ ಎಂದು ಸಭಾಪತಿ ಕೊಳಿವಾಡರ 74 ನೇ ಹುಟ್ಟುಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಪರಿವರ್ತನಾ ರ್ಯಾಲಿಯನ್ನು ಲೇವಡಿ ಮಾಡಿದ ಸಿಎಂ,  ನಮ್ಮಪ್ಪನ ಆಣೆಗೂ  ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.  ನಿಮ್ಮ ಪಕ್ಷದಲ್ಲಿ ಯಡಿಯೂರಪ್ಪ ಸೇರಿದಂತೆ  ಹಲವು ಶಾಸಕರು ಜೈಲಿಗೆ ಹೋಗಿ ಬಂದಿದ್ದಾರೆ. ನನ್ನ ಜೈಲಿಗೆ ಕಳಿಸಲು ನಿಮ್ಮಪ್ಪನಾಣೆಗೂ  ಸಾಧ್ಯವಿಲ್ಲ.  ನಿಮಗೆ ನಾಚಿಗೆ ಮಾನ ಮರ್ಯಾದೆ ಇದೆಯಾ ಎಂದು ಬಿಜೆಪಿಗರನ್ನ ಸಿಎಂ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಹೇಳಿದರು ದೇಶದಲ್ಲಿ ಅಚ್ಚೆದಿನ್ ಆಯಾಗಾ ಎಂದು.  ಎಲ್ಲಿದೆ ಅಚ್ಚೆದಿನ? ಕೇವಲ ಅದಾನಿ,ಅಂಬಾನಿ ಅಂತವರಿಗೆ ಮಾತ್ರ ಅಚ್ಚೇದಿನ ಬಂದಿದೆ.  ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು ಮೂರೆ ದಿನದಲ್ಲಿ  ನಿಮ್ಮ ಅಕೌಂಟಿಗೆ 15 ಲಕ್ಷ ಹಣವನ್ನ ಹಾಕುತ್ತೇನೆ ಎಂದರು.  ಜನರ ಅಕೌಂಟಿಗೆ 15 ರೂಪಾಯಿ ಕೂಡ ಹಾಕಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಮಿತ್ ಶಾ ವಿರುದ್ಧವೂ ಸಿಎಂ ವ್ಯಂಗ್ಯವಾಡಿದ್ದಾರೆ.  ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದವರು.  ಯಡಿಯೂರಪ್ಪನವರೇ, ನಿಮ್ಮ 150 ಮಿಷನ್ ವರ್ಕೌಟ್ ಆಗಲ್ಲ.  ನಿಮ್ಮಪ್ಪನ ಆಣೆಗೂ ನೀವು ಅಧಿಕಾರಕ್ಕೆ ಬರಲ್ಲ. ನಿಮ್ಮ ಪಕ್ಷದಲ್ಲಿ ಜೈಲಿಗೆ ಹೋದವರೆಷ್ಟು ಗೊತ್ತಿಲ್ವ  ನಿಮಗೆ? ಪರಿವರ್ತನಾ ರ್ಯಾಲಿಯಲ್ಲಿ ಖಾಲಿ ಚೇರು ನೋಡಿ ಅಮಿತ್ ಶಾ ಮುಖ ಕೆಂಪಗಾಗಿತ್ತು. ಅಮಿತ್ ಶಾ,  ಅಶೋಕ್ ಮತ್ತು ಶೋಭಾಗೆ ಕ್ಲಾಸ್ ತೆಗೆದುಕೊಂಡರು. ಮೋಡಿ, ಮ್ಯಾಜಿಕ್ ಮಾಡೋ ಮೋದಿ ಆಟ ರಾಜ್ಯದಲ್ಲಿ ನಡಿಯಲ್ಲ ಎಂದು  ಬಿಜೆಪಿಗರನ್ನು ಸಿದ್ದರಾಮಯ್ಯ ಅಪಹಾಸ್ಯ ಮಾಡಿದ್ದಾರೆ.        

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ