ಕಾಲ್ಚೆಂಡಿನ ಮಹಾಕಾಳಗ: ಅಂಡರ್-19 ವಿಶ್ವಕಪ್'ನ ಟೈಮ್ ಟೇಬಲ್

Published : Oct 06, 2017, 04:34 PM ISTUpdated : Apr 11, 2018, 12:45 PM IST
ಕಾಲ್ಚೆಂಡಿನ ಮಹಾಕಾಳಗ: ಅಂಡರ್-19 ವಿಶ್ವಕಪ್'ನ ಟೈಮ್ ಟೇಬಲ್

ಸಾರಾಂಶ

ಒಟ್ಟು 6 ಗುಂಪುಗಳಿದ್ದು, ಪ್ರತೀ ತಂಡಗಳು 3 ಪಂದ್ಯಗಳನ್ನಾಡುತ್ತವೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ನೇರ ಪ್ರೀ ಕ್ವಾರ್ಟರ್'ಫೈನಲ್ ಪ್ರವೇಶಿಸುತ್ತವೆ. ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ 6 ತಂಡಗಳ ಪೈಕಿ ಅತ್ಯುತ್ತಮ 4 ತಂಡಗಳನ್ನ ವಿವಿಧ ಮಾನದಂಡದ ಮೂಲಕ ಆರಿಸಿ ಪ್ರೀ ಕ್ವಾರ್ಟರ್'ಫೈನಲ್'ಗೆ ಬಡ್ತಿ ನೀಡಲಾಗುವುದು.

ಬೆಂಗಳೂರು(ಅ. 06): ಆ ದಿನ ಕೊನೆಗೂ ಬಂದೇಬಿಟ್ಟಿದೆ. ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಇಂದು ಆರಂಭಗೊಂಡಿದೆ. 24 ತಂಡಗಳು, 22 ದಿನ, ಒಟ್ಟು 52 ಪಂದ್ಯ. ಭಾರತ ಮೊದಲ ಬಾರಿಗೆ ಫಿಫಾ ಪಂದ್ಯಾವಳಿಗೆ ಆತಿಥ್ಯ ವಹಿಸಿದೆ. ಭಾರತ ತಂಡ ಕೂಡ ಇದೇ ಮೊದಲ ಬಾರಿಗೆ ವಿಶ್ವಕಪ್'ನಲ್ಲಿ ಕಣಕ್ಕಿಳಿಯುತ್ತಿದೆ. ದೇಶದ 6 ನಗರಗಳು ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದ್ದು, ವಿಶ್ವ ಫುಟ್ಬಾಲ್'ನಲ್ಲಿ ಈಗಾಗಲೇ ಹೆಸರು ಮಾಡಿರುವ ಯುವ ಪ್ರತಿಭೆಗಳು ಪಂದ್ಯಾವಳಿಯ ಆಕರ್ಷಣೆ ಹೆಚ್ಚಿಸಲಿದ್ದಾರೆ. ಇಂಗ್ಲೆಂಡ್'ನ ಜೇಡನ್ ಸ್ಯಾಂಟೊ, ಅಮೆರಿಕದ ಜೋಶ್ ಸರ್ಜೆಂಟ್, ಸ್ಪೇನ್'ನ ಅಬೆಲ್ ರೂಯಿಜ್, ಫೆರ್ರಾನ್ ಟೊರೆಸ್, ಜರ್ಮನಿಯ ಜಾನ್-ಫಿಟೆ ಆರ್ಪ್ ಈಗಾಗಲೇ ವಿಶ್ವದ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್'ಗಳಲ್ಲಿ ಆಡಿ ಮಿಂಚಿದ್ದಾರೆ. 3 ಬಾರಿ ಚಾಂಪಿಯನ್ ಬ್ರೆಜಿಲ್, ಯುರೋಪಿಯನ್ ಚಾಂಪಿಯನ್ ಸ್ಪೇನ್ ಹಾಗೂ ಮೆಕ್ಸಿಕೋ ಪ್ರಶಸ್ತಿ ಗೆಲ್ಲುವ ಫೇವರಿಟ್ ಟೀಮ್'ಗಳೆನಿಸಿಕೊಂಡಿವೆ. 2 ಬಾರಿ ಚಾಂಪಿಯನ್ ಘಾನಾ, ಜರ್ಮನಿ, ಇಂಗ್ಲೆಂಡ್ ಹಾಗೂ ಅಮೆರಿಕ ಸಹ ಪ್ರಶಸ್ತಿ ರೇಸ್'ನಲ್ಲಿವೆ.

ಎ ಗುಂಪು:
ಭಾರತ, ಅಮೆರಿಕ, ಕೊಲಂಬಿಯಾ, ಘಾನಾ

ಬಿ ಗುಂಪು:
ಪರಗ್ವೆ, ಮಾಲಿ, ನ್ಯೂಜಿಲೆಂಡ್, ಟರ್ಕಿ

ಸಿ ಗುಂಪು:
ಇರಾನ್, ಗ್ಯುನಿಯಾ, ಜರ್ಮನಿ, ಕೋಸ್ಟ-ರಿಕಾ

ಡಿ ಗುಂಪು:
ಉತ್ತರ ಕೊರಿಯಾ, ನೈಗರ್, ಬ್ರಜಿಲ್, ಸ್ಪೇನ್

ಇ ಗುಂಪು:
ಹೊಂಡುರಾಸ್, ಜಪಾನ್, ನ್ಯೂ ಸಲೆಡೋನಿಯಾ, ಫ್ರಾನ್ಸ್

ಎಫ್ ಗುಂಪು:
ಇರಾಕ್, ಮೆಕ್ಸಿಕೋ, ಚಿಲಿ, ಇಂಗ್ಲೆಂಡ್

ಎಲ್ಲೆಲ್ಲಿ ಪಂದ್ಯಗಳು?:
ಜವಾಹರಲಾಲ್ ನೆಹರೂ ಸ್ಟೇಡಿಯಂ, ನವದೆಹಲಿ
ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ
ಫಟೋರ್ಡಾ ಸ್ಟೇಡಿಯಂ, ಗೋವಾ
ಜವಾಹರಲಾಲ್ ನೆಹರೂ ಸ್ಟೇಡಿಯಂ, ಕೊಚ್ಚಿ
ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂ, ಗುವಾಹತಿ
ಸಾಲ್ಟ್ ಲೇಕ್ ಸ್ಟೇಡಿಯಂ, ಕೋಲ್ಕತಾ

ದಿನಾಂಕಪಂದ್ಯಸಮಯಸ್ಥಳ
ಅ. 6ಕೊಲಂಬಿಯಾ ವರ್ಸಸ್ ಘಾನಾಸಂಜೆ 5ಕ್ಕೆನವದೆಹಲಿ
 ನ್ಯೂಜಿಲೆಂಡ್ ವರ್ಸಸ್ ಟರ್ಕಿಸಂಜೆ 5ಕ್ಕೆನವದೆಹಲಿ
 ಭಾರತ ವರ್ಸಸ್ ಅಮೆರಿಕರಾತ್ರಿ 8ಕ್ಕೆನವಿ ಮುಂಬೈ
 ಪರಗ್ವೆ ವರ್ಸಸ್ ಮಾಲಿರಾತ್ರಿ 8ಕ್ಕೆನವಿ ಮುಂಬೈ
ಅ. 7ಜರ್ಮನಿ ವರ್ಸಸ್ ಕೋಸ್ಟಾರಿಕಾಸಂಜೆ 5ಕ್ಕೆಗೋವಾ
 ಬ್ರಜಿಲ್ ವರ್ಸಸ್ ಸ್ಪೇನ್ಸಂಜೆ 5ಕ್ಕೆಕೊಚ್ಚಿ
 ಇರಾನ್ ವರ್ಸಸ್ ಗಿನಿಯಾರಾತ್ರಿ 8ಕ್ಕೆಗೋವಾ
 ಉತ್ತರ ಕೊರಿಯಾ ವರ್ಸಸ್ ನೈಜರ್ರಾತ್ರಿ 8ಕ್ಕೆಕೊಚ್ಚಿ
ಅ. 8ನ್ಯೂ ಸಲೆಡೋನಿಯಾ ವರ್ಸಸ್ ಫ್ರಾನ್ಸ್ಸಂಜೆ 5ಕ್ಕೆಗುವಾಹತಿ
 ಚಿಲಿ ವರ್ಸಸ್ ಇಂಗ್ಲೆಂಡ್ಸಂಜೆ 5ಕ್ಕೆಕೋಲ್ಕತಾ
 ಹೊಂಡುರಾಸ್ ವರ್ಸಸ್ ಜಪಾನ್ರಾತ್ರಿ 8ಕ್ಕೆಗುವಾಹತಿ
 ಇರಾಕ್ ವರ್ಸಸ್ ಮೆಕ್ಸಿಕೋರಾತ್ರಿ 8ಕ್ಕೆಕೋಲ್ಕತಾ
ಅ. 9ಘಾನಾ ವರ್ಸಸ್ ಅಮೆರಿಕಸಂಜೆ 5ಕ್ಕೆನವದೆಹಲಿ
 ಟರ್ಕಿ ವರ್ಸಸ್ ಮಾಲಿಸಂಜೆ 5ಕ್ಕೆನವಿ ಮುಂಬೈ
 ಭಾರತ ವರ್ಸಸ್ ಕೊಲಂಬಿಯಾರಾತ್ರಿ 8ಕ್ಕೆನವದೆಹಲಿ
 ಪರಗ್ವೆ ವರ್ಸಸ್ ನ್ಯೂಜಿಲೆಂಡ್ರಾತ್ರಿ 8ಕ್ಕೆನವಿ ಮುಂಬೈ
ಅ. 10ಕೋಸ್ಟಾರಿಕಾ ವರ್ಸಸ್ ಗಿನಿಯಾಸಂಜೆ 5ಕ್ಕೆಗೋವಾ
 ಸ್ಪೇನ್ ವರ್ಸಸ್ ನೈಜರ್ಸಂಜೆ 5ಕ್ಕೆಕೊಚ್ಚಿ
 ಇರಾನ್ ವರ್ಸಸ್ ಜರ್ಮನಿರಾತ್ರಿ 8ಕ್ಕೆಗೋವಾ
 ಉತ್ತರ ಕೊರಿಯಾ ವರ್ಸಸ್ ಬ್ರಜಿಲ್ರಾತ್ರಿ 8ಕ್ಕೆಕೊಚ್ಚಿ
ಅ. 11ಫ್ರಾನ್ಸ್ ವರ್ಸಸ್ ಜಪಾನ್ಸಂಜೆ 5ಕ್ಕೆಗುವಾಹತಿ
 ಇಂಗ್ಲೆಂಡ್ ವರ್ಸಸ್ ಮೆಕ್ಸಿಕೋಸಂಜೆ 5ಕ್ಕೆಕೋಲ್ಕತಾ
 ಹೊಂಡುರಾಸ್ ವರ್ಸಸ್ ನ್ಯೂ ಸಲೇಡೋನಿಯಾರಾತ್ರಿ 8ಕ್ಕೆಗುವಾಹತಿ
 ಇರಾಕ್ ವರ್ಸಸ್ ಚಿಲಿರಾತ್ರಿ 8ಕ್ಕೆಕೋಲ್ಕತಾ
ಅ. 12ಮಾಲಿ ವರ್ಸಸ್ ನ್ಯೂಜಿಲೆಂಡ್ಸಂಜೆ 5ಕ್ಕೆನವದೆಹಲಿ
 ಟರ್ಕಿ ವರ್ಸಸ್ ಪರಗ್ವೆಸಂಜೆ 5ಕ್ಕೆನವಿ ಮುಂಬೈ
 ಭಾರತ ವರ್ಸಸ್ ಘಾನಾರಾತ್ರಿ 8ಕ್ಕೆನವದೆಹಲಿ
 ಅಮೆರಿಕ ವರ್ಸಸ್ ಕೊಲಂಬಿಯಾರಾತ್ರಿ 8ಕ್ಕೆನವಿ ಮುಂಬೈ
ಅ. 13ಕೋಸ್ಟಾರಿಕಾ ವರ್ಸಸ್ ಇರಾನ್ಸಂಜೆ 5ಕ್ಕೆಗೋವಾ
 ಗಿನಿಯಾ ವರ್ಸಸ್ ಜರ್ಮನಿಸಂಜೆ 5ಕ್ಕೆಕೊಚ್ಚಿ
 ನೈಜರ್ ವರ್ಸಸ್ ಬ್ರಜಿಲ್ರಾತ್ರಿ 8ಕ್ಕೆಗೋವಾ
 ಸ್ಪೇನ್ ವರ್ಸಸ್ ಉತ್ತರ ಕೊರಿಯಾರಾತ್ರಿ 8ಕ್ಕೆಕೊಚ್ಚಿ
ಅ. 14ಫ್ರಾನ್ಸ್ ವರ್ಸಸ್ ಹೊಂಡುರಾಸ್ಸಂಜೆ 5ಕ್ಕೆಗುವಾಹತಿ
 ಜಪಾನ್ ವರ್ಸಸ್ ನ್ಯೂ ಸಲೆಡೋನಿಯಾಸಂಜೆ 5ಕ್ಕೆಕೋಲ್ಕತಾ
 ಮೆಕ್ಸಿಕೋ ವರ್ಸಸ್ ಚಿಲಿರಾತ್ರಿ 8ಕ್ಕೆಗುವಾಹತಿ
 ಇಂಗ್ಲೆಂಡ್ ವರ್ಸಸ್ ಇರಾಕ್ರಾತ್ರಿ 8ಕ್ಕೆಕೋಲ್ಕತಾ
ಅ. 16ಪ್ರೀಕ್ವಾರ್ಟರ್'ಫೈನಲ್ಸ್ 1 ನವದೆಹಲಿ
 ಪ್ರೀಕ್ವಾರ್ಟರ್'ಫೈನಲ್ಸ್ 2 ನವದೆಹಲಿ
ಅ. 17ಪ್ರೀಕ್ವಾರ್ಟರ್'ಫೈನಲ್ಸ್ 3 ಕೋಲ್ಕತಾ
 ಪ್ರೀಕ್ವಾರ್ಟರ್'ಫೈನಲ್ಸ್ 4 ಮಾರ್ಗೋವಾ
 ಪ್ರೀಕ್ವಾರ್ಟರ್'ಫೈನಲ್ಸ್ 5 ಗುವಾಹತಿ
 ಪ್ರೀಕ್ವಾರ್ಟರ್'ಫೈನಲ್ಸ್ 6 ಮಾರ್ಗೋವಾ
ಅ. 18ಪ್ರೀಕ್ವಾರ್ಟರ್'ಫೈನಲ್ಸ್ 7 ಕೊಚ್ಚಿ
 ಪ್ರೀಕ್ವಾರ್ಟರ್'ಫೈನಲ್ಸ್ 8 ನವಿ ಮುಂಬೈ
ಅ. 21ಕ್ವಾರ್ಟರ್'ಫೈನಲ್ 1 ಮಾರ್ಗೋವಾ
 ಕ್ವಾರ್ಟರ್'ಫೈನಲ್ 2 ಗುವಾಹತಿ
ಅ. 22ಕ್ವಾರ್ಟರ್'ಫೈನಲ್ 3 ಕೋಲ್ಕತಾ
 ಕ್ವಾರ್ಟರ್'ಫೈನಲ್ 4 ಕೊಚ್ಚಿ
ಅ. 25ಸೆಮಿಫೈನಲ್ 1 ಗುವಾಹತಿ
 ಸೆಮಿಫೈನಲ್ 2 ನವಿ ಮುಂಬೈ
ಅ. 28ಮೂರನೇ ಸ್ಥಾನಕ್ಕೆ ಪಂದ್ಯ ಕೋಲ್ಕತಾ
ಅ. 28ಫೈನಲ್ ಕೋಲ್ಕತಾ

 

ಭಾರತದ ಪಂದ್ಯಗಳ ಪಟ್ಟಿ:
ಅಕ್ಟೋಬರ್ 6: ಅಮೆರಿಕ ವಿರುದ್ಧ
ಅಕ್ಟೋಬರ್ 9: ಕೊಲಂಬಿಯಾ ವಿರುದ್ಧ
ಅಕ್ಟೋಬರ್ 12: ಘಾನಾ ವಿರುದ್ಧ
(ಈ ಮೂರೂ ಪಂದ್ಯಗಳು ನವದೆಹಲಿಯ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯಲಿವೆ.)

ಗ್ರೂಪ್ ಹಂತದ ಬಳಿಕ?
ಒಟ್ಟು 6 ಗುಂಪುಗಳಿದ್ದು, ಪ್ರತೀ ತಂಡಗಳು 3 ಪಂದ್ಯಗಳನ್ನಾಡುತ್ತವೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ನೇರ ಪ್ರೀ ಕ್ವಾರ್ಟರ್'ಫೈನಲ್ ಪ್ರವೇಶಿಸುತ್ತವೆ. ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ 6 ತಂಡಗಳ ಪೈಕಿ ಅತ್ಯುತ್ತಮ 4 ತಂಡಗಳನ್ನ ವಿವಿಧ ಮಾನದಂಡದ ಮೂಲಕ ಆರಿಸಿ ಪ್ರೀ ಕ್ವಾರ್ಟರ್'ಫೈನಲ್'ಗೆ ಬಡ್ತಿ ನೀಡಲಾಗುವುದು.

ಪ್ರಸಾರ: ಸೋನಿ ಟೆನ್ ಮತ್ತು ಸೋನಿ ಇಎಸ್'ಪಿಎನ್

(epaperkannadaprabha.com)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?
ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ