ಮೋದಿ ಟೀಕೆ: ಸಿನ್ಹಾ ಆಯ್ತು, ಈಗ ಅರುಣ್ ಶೌರಿ ಸರದಿ

Published : Oct 06, 2017, 04:33 PM ISTUpdated : Apr 11, 2018, 12:55 PM IST
ಮೋದಿ ಟೀಕೆ: ಸಿನ್ಹಾ ಆಯ್ತು, ಈಗ ಅರುಣ್  ಶೌರಿ ಸರದಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕರೇ ಇತ್ತೀಚಿಗೆ ಮಾತನಾಡುತ್ತಿದ್ದಾರೆ. ಕಳೆದ ವಾರ ಯಶವಂತ್ ಸಿನ್ಹಾ ಮೋದಿ ವಿರುದ್ದ ಮಾತನಾಡಿ ಸುದ್ಧಿಯಾಗಿದ್ದರು. ಇಂದು ಮಾಜಿ ಬಿಜೆಪಿ ಸಚಿವ ಅರುಣ್ ಶೌರಿ ಮಾತನಾಡಿದ್ದಾರೆ. ಮೋದಿಯವರಿಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ನವದೆಹಲಿ (ಅ.06): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕರೇ ಇತ್ತೀಚಿಗೆ ಮಾತನಾಡುತ್ತಿದ್ದಾರೆ. ಕಳೆದ ವಾರ ಯಶವಂತ್ ಸಿನ್ಹಾ ಮೋದಿ ವಿರುದ್ದ ಮಾತನಾಡಿ ಸುದ್ಧಿಯಾಗಿದ್ದರು. ಇಂದು ಮಾಜಿ ಬಿಜೆಪಿ ಸಚಿವ ಅರುಣ್ ಶೌರಿ ಮಾತನಾಡಿದ್ದಾರೆ. ಮೋದಿಯವರಿಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ನಾನು ಸಾಕಷ್ಟು ತಪ್ಪು ಮಾಡಿದ್ದೇನೆ. ಅದರಲ್ಲೂ  ವಿ ಕೆ ಸಿಂಗ್ ಹಾಗೂ ಮೋದಿಯವರಿಗೆ ಬೆಂಬಲ ನೀಡಿ ದೊಡ್ಡ ತಪ್ಪು ಮಾಡಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ಅಧಿಕಾರಕ್ಕೆ  ಬಂದ ತಕ್ಷಣ ಬದಲಾಗುವ ನಾಯಕರನ್ನು ನಂಬಬೇಡಿ. ಮೋದಿಯವರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ  ನೀತಿಗಳ ವಿರುದ್ಧ ಮಾತನಾಡುತ್ತಾ, ಕುಸಿಯುತ್ತಿರುವ ಆರ್ಥಿಕ ಅಭಿವೃದ್ಧಿ ದರ ಹಾಗೂ ಹೆಚ್ಚಾಗುತ್ತಿರುವ ನಿರುದ್ಯೋಗದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು