ಕುಲ್ಗಾಮ್ ಎನ್'ಕೌಂಟರ್: ಇಬ್ಬರು ಉಗ್ರರು ಹತ - ಓರ್ವನ ಬಂಧನ

Published : Sep 11, 2017, 01:00 PM ISTUpdated : Apr 11, 2018, 12:54 PM IST
ಕುಲ್ಗಾಮ್ ಎನ್'ಕೌಂಟರ್: ಇಬ್ಬರು ಉಗ್ರರು ಹತ - ಓರ್ವನ ಬಂಧನ

ಸಾರಾಂಶ

ಖುದ್ವಾನಿಯಲ್ಲಿ ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂಧಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಓರ್ವ ಉಗ್ರನನ್ನು ಬಂಧಿಸುವಲ್ಲಿ  ಭದ್ರತಾ ಪಡೆಗಳು ಸಫಲವಾಗಿವೆ.

ಶ್ರೀನಗರ(ಸೆ.11): ಜಮ್ಮು ಕಾಶ್ಮೀರದ ಕುಲ್ಗಾಮ್​'ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್​ ಸಂಘಟನೆಯ ಇಬ್ಬರು ಉಗ್ರರನ್ನ ಭಾರತೀಯ ಸೇನೆ ಹೊಡೆದುರುಳಿಸಿದೆ.

ಖುದ್ವಾನಿಯಲ್ಲಿ ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂಧಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಓರ್ವ ಉಗ್ರನನ್ನು ಬಂಧಿಸುವಲ್ಲಿ  ಭದ್ರತಾ ಪಡೆಗಳು ಸಫಲವಾಗಿವೆ.

ಕಾರ್ಯಾಚರಣೆ ವೇಳೆ ಉಗ್ರರು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಲಿಯಾದ ಉಗ್ರರನ್ನು ಹಿಜ್ಬುಲ್‌ ಮುಂಜಾಹಿದ್ದೀನ್‌ ಸಂಘಟನೆಯ ದಾವೂದ್‌ ಅಹ್ಮದ್‌ ಅಲಿ ಮತ್ತು ಶೈಯಾರ್‌ ಅಹ್ಮದ್‌ ವಾನಿ ಎಂದು ಗುರುತಿಸಲಾಗಿದೆ. ಇನ್ನು ಬಂಧಿತ ಉಗ್ರನನ್ನು  ಆರೀಫ್ ಸೂಫಿ ಎಂದು ಗುರುತಿಸಲಾಗಿದೆ. ಇದೇ ವೇಳೆ ಉಗ್ರರಿಂದ ಒಂದು ಎ.ಕೆ 47 ಹಾಗೂ ಒಂದು ಇನ್'ಸಾನ್ ರೈಫಲ್ ವಶಪಡಿಸಿಕೊಳ್ಳಲಾಗಿದೆ.

ಇನ್ನು ಕುಪ್ವಾರ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ  ಸಂಭವಿಸಿದ ನೆಲಬಾಂಬ್ ಸ್ಫೋಟಕ್ಕೆ ಮೂವರು ಯೋಧರು ಗಾಯಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಚಿತೆಯಿಂದ ಎದ್ದು ಬಂದು ಬರ್ತ್‌ಡೇ ಆಚರಿಸಿದ 103ರ ಹರೆಯದ ಅಜ್ಜಿ
ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ