
ಹುಬ್ಬಳ್ಳಿ(ಸೆ.11): ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಿಂದ ಟಿಸಿಯನ್ನೇ ಹೊರದಬ್ಬಿರುವ ಘಟನೆ ರಾಯಭಾಗ-ಘಟಪ್ರಭಾ ರೈಲು ಮಾರ್ಗದಲ್ಲಿ ನಡೆದಿದೆ.
ನಿಜಾಮುದ್ದಿನ-ವಾಸ್ಕೋಡಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ರವಿವಾರ ಬೆಳಗಿನ ಜಾವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಿನ್ನಪ್ಪ ಕೆ.ಎಮ್. ರೈಲಿನಿಂದ ತಳ್ಳಲ್ಪಟ್ಟ ಟಿಸಿ.
ರೈಲಿನ ಸ್ಲೀಪರ್ ಕೋಚ್'ನಲ್ಲಿ ಯುವಕನೊಬ್ಬ ಅನುಮಾನಾಸ್ಪದಾಗಿ ಓಡಾಡುತ್ತಿದ್ದ. ಈ ವೇಳೆ ಟಿಸಿ ಯುವಕನನ್ನು ತಡೆದು ವಿಚಾರಿಸಿದಾಗ ಆತನ ಬಳಿ ಟಿಕೆಟ್ ಇರಲಿಲ್ಲ. ಜೊತೆಗೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಹಾಗಾಗಿ ಘಟಪ್ರಭಾ ರೈಲ್ವೆ ಪೊಲೀಸರಿಗೆ ಒಪ್ಪಿಸಲು ಯುವಕನನ್ನ ತಮ್ಮ ಬಳಿ ಇರಿಸಿಕೊಂಡಿದ್ದರು. ಈ ವೇಳೆ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಏಕಾಏಕಿ ಟಿಸಿಯನ್ನೇ ರೈಲಿನಿಂದ ತಳ್ಳಿ ಕಳ್ಳ ಪರಾರಿಯಾಗಿದ್ದಾನೆ.ಈ ಬಗ್ಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.