ಕಾಂಗ್ರೆಸ್ ಶಾಸಕರು ಉಳಿದಿರುವ ರೆಸಾರ್ಟ್'ಗೆ 982 ಕೋಟಿ ದಂಡ

By Suvarna Web DeskFirst Published Jul 31, 2017, 10:19 PM IST
Highlights

ಹೊರವಲಯದ 77.29 ಎಕರೆ ಸರ್ಕಾರಿ ಭೂಮಿಯಲ್ಲಿ ಈಗಲ್‌ಟನ್ ರೆಸಾರ್ಟ್ ನಿರ್ಮಿಸಿರುವ ಮೆಸರ್ಸ್ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸುಪ್ರಿಂಕೋರ್ಟ್ ಆದೇಶದ ಅನುಸಾರ ಆಕ್ರಮಿತ ಭೂಮಿಯ ಮಾರುಕಟ್ಟೆ ಮೌಲ್ಯವಾದ 982  ಕೋಟಿ.ರೂಗಳನ್ನು ಒಂದು ತಿಂಗಳೊಳಗೆ ಸರ್ಕಾರಕ್ಕೆ ಭರಿಸದಿದ್ದರೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು (ಜು.31): ಹೊರವಲಯದ 77.29 ಎಕರೆ ಸರ್ಕಾರಿ ಭೂಮಿಯಲ್ಲಿ ಈಗಲ್‌ಟನ್ ರೆಸಾರ್ಟ್ ನಿರ್ಮಿಸಿರುವ ಮೆಸರ್ಸ್ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸುಪ್ರಿಂಕೋರ್ಟ್ ಆದೇಶದ ಅನುಸಾರ ಆಕ್ರಮಿತ ಭೂಮಿಯ ಮಾರುಕಟ್ಟೆ ಮೌಲ್ಯವಾದ 982  ಕೋಟಿ.ರೂಗಳನ್ನು ಒಂದು ತಿಂಗಳೊಳಗೆ ಸರ್ಕಾರಕ್ಕೆ ಭರಿಸದಿದ್ದರೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.


ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಶ್ಯಾನಮಂಗಲ, ಬಿಲ್ಲ ಕೆಂಪನಹಳ್ಳಿ ಹಾಗೂ ಬಾನಂದೂರು ಗ್ರಾಮಗಳಲ್ಲಿ 77.29 ಎಕರೆ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುವ ಮೆ. ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್‌ನ  ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ಗೆ ಸುಪ್ರಿಂಕೋರ್ಟ್‌ನ ನಿರ್ದೇಶನದಂತೆ ಮಾರುಕಟ್ಟೆ ದರದ ಆಧಾರದ ಮೇರೆಗೆ ರಾಜ್ಯ ಸರ್ಕಾರವು ವಿಧಿಸಿರುವ ದಂಡ  982.07 ಕೋಟಿ ರೂ ಗಳನ್ನು ಒಂದು ತಿಂಗಳೊಳಗಾಗಿ ಪಾವತಿಸಿದಲ್ಲಿ  ಜಮೀನು ಅಕ್ರಮ ಸಕ್ರಮ ಮಾಡಲು ಸಂಪುಟ ಸಮ್ಮತಿಸಿದೆ. ಈಗಾಗಲೇ ವಸೂಲಿ ಮಾಡಿರುವ ಪರಿವರ್ತನಾ ಶುಲ್ಕವನ್ನು ಮರು ಪಾವತಿಸಿ, ಸಂಪೂರ್ಣ ಹಣ ಭರಿಸಿದ ನಂತರ ರೆಸಾರ್ಟ್‌ಗೆ ಜಮೀನು ಮಂಜೂರು ಮಾಡಬಹುದು ಎಂದು ಸುಪ್ರಿಂಕೋರ್ಟ್ ಹೇಳಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Latest Videos

click me!