ಸಲಿಂಗಿ ಮದುವೆ: ಪೋಷಕರ ಓಲೈಕೆಗೂ ಮಣಿಯದ ಬೆಂಗಳೂರಿನ ತರುಣಿಯರು

By Suvarna Web DeskFirst Published Jul 5, 2017, 5:37 PM IST
Highlights

ಸಲಿಂಗ ಮದುವೆಯನ್ನು 22 ದೇಶಗಳು ಸಿಂಧುಗೊಳಿಸಿದ್ದು ಭಾರತ ಇನ್ನೂ ಒಪ್ಪಿಕೊಳ್ಳಬೇಕಾಗಿದೆ. ಇದನ್ನು ಸಹಜ ಎನ್ನುವಂತೆ ಒಪ್ಪಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ಹೀಗಿರುವಾಗ ಕೋರಮಂಗಲದಲ್ಲಿ ಸಲಿಂಗ ಮದುವೆ ನಡೆದಿದ್ದು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಜು.05): ಸಲಿಂಗ ಮದುವೆಯನ್ನು 22 ದೇಶಗಳು ಸಿಂಧುಗೊಳಿಸಿದ್ದು ಭಾರತ ಇನ್ನೂ ಒಪ್ಪಿಕೊಳ್ಳಬೇಕಾಗಿದೆ. ಇದನ್ನು ಸಹಜ ಎನ್ನುವಂತೆ ಒಪ್ಪಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ಹೀಗಿರುವಾಗ ಕೋರಮಂಗಲದಲ್ಲಿ ಸಲಿಂಗ ಮದುವೆ ನಡೆದಿದ್ದು ಚರ್ಚೆಗೆ ಕಾರಣವಾಗಿದೆ.

25 ವರ್ಷದ ರಂಜಿತಾ (ಹೆಸರು ಬದಲಾಯಿಸಲಾಗಿದೆ) 21 ವರ್ಷದ ಕವಿತಾ (ಹೆಸರು ಬದಲಾಯಿಸಲಾಗಿದೆ) ಕೋರಮಂಗಲದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಇವರಿಬ್ಬರೂ ದೂರದ ಸಂಬಂಧಿಗಳು ಎಂದು ತಿಳಿದು ಬಂದಿದೆ. ರಂಜಿತಾ ಕಾಲ್ ಸೆಂಟರ್ ಒಂದರ ದ್ಯೋಗಿಯಾಗಿದ್ದು. ಕವಿತಾ ಕಾಲೇಜೊಂದರಲ್ಲಿ ಬಿಕಾಂ ಕಲಿಯುತ್ತಿದ್ದಾರೆ. ಇವರಿಬ್ಬರು ಮದುವೆಯಾದ ವಿಷಯ ತಿಳಿಯುತ್ತಿದ್ದಂತೆ  ಕವಿತಾ ಪೋಷಕರು ದೂರು ನೀಡಿದ್ದಾರೆ. ಪೊಲೀಸರು ಈ ಹುಡುಗಿ ಮತ್ತು ಪೋಷಕರನ್ನು ರಾಜಿ ಮಾಡಿಸಲು ಯತ್ನಿಸುತ್ತಿದ್ದಾರೆ.   

ನಾನು ಚಿಕ್ಕಂದಿನಿಂದಲೇ ಕವಿತಾ ಕಡೆ ಆಕರ್ಷಿತಳಾಗಿದ್ದೆ. ಆದರೆ ಕವಿತಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾದ್ದರಿಂದ ಒಪ್ಪಿಸುವುದು ಕಷ್ಟ ಎಂದು ತಿಳಿದಿತ್ತು. ನಿಧಾನವಾಗಿ ಆಕೆಗೆ ಆಧುನಿಕ ಜೀವನಶೈಲಿಯನ್ನು, ಯೋಚನೆಯನ್ನು ಪರಿಚಯಿಸತೊಡಗಿದೆ. ದುಬಾರಿ ಗಿಫ್ಟ್’ಗಳನ್ನು ನೀಡುತ್ತಿದ್ದೆ. ನಾನು ನನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಮೊದಲು ಕವಿತಾ ಒಪ್ಪಲಿಲ್ಲ. ಆದರೂ ಭರವಸೆ ಕಳೆದುಕೊಳ್ಳದೇ ಅವಳ ಹಿಂದೆ ಬಿದ್ದೆ. ಕೊನೆಗೆ ಮದುವೆಯಾಗಬೇಕೆಂದು ನಿರ್ಧರಿಸಿ ಮನೆ ಬಿಟ್ಟು ಓಡಿ ಹೋಗಲು ಪ್ಲಾನ್ ಮಾಡಿದ್ವಿ ಎಂದು ರಂಜಿತಾ ಹೇಳಿದ್ದಾರೆ.

ಪೋಷಕರು ಎಷ್ಟೇ ಓಲೈಕೆ ಮಾಡಿದರೂ ವಾಪಸ್ ಮನೆಗೆ ಹೋಗಲು ಇಬ್ಬರೂ ಒಲ್ಲೆ ಎಂದಿದ್ದಾರೆ. ಇಬ್ಬರೂ ಒಟ್ಟಿಗೆ ಬಾಳುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಪ್ರಕರಣವನ್ನು ವನಿತಾ ಸಹಾಯವಾಣಿಗೆ ವಹಿಸಲಾಗಿದೆ.

ಭಾರತೀಯ ನೀತಿ ಸಂಹಿತೆ ಸೆಕ್ಷನ್ 377 ರ ಪ್ರಕಾರ ಸಲಿಂಗ ವಿವಾಹ ಕ್ರಿಮಿನಲ್ ಅಪರಾಧ. ಇಂತವರಿಗೆ ಜೀವಾವಧಿ ಶಿಕ್ಷೆ, 10 ವರ್ಷ ಜೈಲುಶಿಕ್ಷೆ ಅಥವಾ ದಂಡ ವಿಧಿಸಬಹುದು.   

click me!