ಭ್ರಷ್ಟಾಚಾರ ತಡೆ: ಈಗ ಸರ್ಕಾರಿ ನೌಕರರ ಮೇಲೆ ಸರ್ಕಾರದ ಕಣ್ಣು!

By Suvarna Web DeskFirst Published Jul 5, 2017, 4:11 PM IST
Highlights

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಜಾಗೃತ ಆಯೋಗವು (CVC) ಸರ್ಕಾರಿ ನೌಕರರ ಮೇಲೆ ನಿಗಾ ವಹಿಸಿದೆ.  ಸರ್ಕಾರಿ ನೌಕರರ ಸಂಶಯಾಸ್ಪದ ಬ್ಯಾಂಕ್ ವ್ಯವಹಾರಗಳ ಪರಿಶೀಲನೆ ನಡೆಸಲು ಮುಂದಾಗಿದೆಯೆಂದು ಪಿಟಿಐ ವರದಿ ಮಾಡಿದೆ.

ನವದೆಹಲಿ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಜಾಗೃತ ಆಯೋಗವು (CVC) ಸರ್ಕಾರಿ ನೌಕರರ ಮೇಲೆ ನಿಗಾ ವಹಿಸಿದೆ.  ಸರ್ಕಾರಿ ನೌಕರರ ಸಂಶಯಾಸ್ಪದ ಬ್ಯಾಂಕ್ ವ್ಯವಹಾರಗಳ ಪರಿಶೀಲನೆ ನಡೆಸಲು ಮುಂದಾಗಿದೆಯೆಂದು ಪಿಟಿಐ ವರದಿ ಮಾಡಿದೆ.

ಹಣಕಾಸು ಗುಪ್ತಚರ ಘಟಕಗಳ (FIU) ಮೂಲಕ ಸಾಕಾಷ್ಟು ಮಾಹಿತಿ ಪಡೆಯುತ್ತಿದ್ದೇವೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆವು ಎಂದು ಜಾಗೃತ ಆಯುಕ್ತ ಟಿ.ಏ.ಭಾಸಿನ್ ಹೇಳಿದ್ದಾರೆ.

FIUವು ಸರ್ಕಾರಿ ನೌಕರರ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಸಂಶಯಾಸ್ಪದ ವ್ಯವಹಾರ ವರದಿಯನ್ನು (STR) ಜಾಗೃತ ಆಯೋಗಕ್ಕೆ ನಿಗದಿತವಾಗಿ ಸಲ್ಲಿಸುತ್ತದೆ. ಸಂಶಾಯಾಸ್ಪದ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ, ವಿಶ್ಲೇಷಿಸುವ  ಹಾಗೂ ಸಂಬಂಧಪಟ್ಟವರಿಗೆ ಮಾಹಿತಿಯನ್ನು ರವಾನಿಸುವ ಕೆಲಸವನ್ನು FIUಗೆ ವಹಿಸಲಾಗಿದೆ.

ಈ ಮೂಲಕ ಸರ್ಕಾರಿ ನೌಕರರು ಹಾಗೂ ಇತರ ವ್ಯಕ್ತಿಗಳ ನಡುವೆ ಇರುವ ಹಣಕಾಸು ನಂಟನ್ನು ಪತ್ತೆಹಚ್ಚಬಹುದಾಗಿದೆ ಎಂದು ಹೇಳಲಾಗಿದೆ. ಸಿವಿಸಿ ಅಲ್ಲದೇ ಜಾರಿ ನಿರ್ದೇಶನಾಲಯ (ED), ಸಿಬಿಐ, ಆರ್’ಬಿಐ, ಸೆಬಿ, ಎನ್’ಐಏ, ಕೇಂದ್ರೀಯ ಆರ್ಥಿಕ ಗುಪ್ತಚರ ಇಲಾಖೆ, ಹಾಗೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ FIU ವರದಿಗಳನ್ನು ಸಲ್ಲಿಸುತ್ತದೆ.

click me!