ಗಣರಾಜ್ಯೋತ್ಸವ ಪ್ರಯುಕ್ತ ಕನ್ನಡ ಸೇರಿ 9 ಭಾಷೆಗಳಲ್ಲಿ ನೂತನ ಎಮೋಜಿ ಪರಿಚಯಿಸಿದ ಟ್ವಿಟರ್

By Suvarna Web deskFirst Published Jan 24, 2018, 3:32 PM IST
Highlights

ಪ್ರತಿ ಗಣರಾಜ್ಯೋತ್ಸವದ ದಿನದಂದು ನವದೆಹಲಿಯ ಇಂಡಿಯಾ ಗೇಟ್ ಬಳಿ ಪ್ರಧಾನ ಮಂತ್ರಿಗಳು ಸೈನಿಕರ ಹುತಾತ್ಮ ಸ್ಥಳ ಅಮರ್ ಜವಾನ್ ಜ್ಯೋತಿ ಸ್ಥಳಕ್ಕೆ ನಮಿಸಿದ ನಂತರ ಮುಂದಿನ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ.

ನವದೆಹಲಿ(ಜ.24): ಗಣರಾಜ್ಯೋತ್ಸವದ 69ನೇ ವರ್ಷಾಚರಣೆಯ ಪ್ರಯುಕ್ತ ಸಾಮಾಜಿಕ ಮಾಧ್ಯಮ ಟ್ವಿಟರ್ ಕನ್ನಡವೂ ಸೇರಿದಂತೆ 9 ಭಾಷೆಗಳಲ್ಲಿ  #ಗಣರಾಜ್ಯೋತ್ಸವದ ಪ್ರಯುಕ್ತ ಹ್ಯಾಶ್'ಟ್ಯಾಗ್'ವುಳ್ಳ ವಿಶೇಷ ಎಮೋಜಿ ಯನ್ನು ಪರಿಚಯಿಸಿದೆ.

ಇಂಡಿಯಾ ಗೇಟ್ ಚಿಹ್ನೆ ಇರುವ ಎಮೋಜಿಯು ಇಂಗ್ಲಿಷ್,ಹಿಂದಿ, ತಮಿಳು, ಗುಜರಾತಿ, ಉರ್ದು ಸೇರಿದಂತೆ 9 ಭಾಷೆಗಳಲ್ಲಿ ಲಭ್ಯವಾಗಲಿದೆ. ಈ ಎಮೋಜಿ ಜನವರಿ 29ರವರೆಗೂ ಲಭ್ಯವಾಗಲಿವೆ. ಗಣರಾಜ್ಯೋತ್ಸವದ ಸುದ್ದಿಗಳಿಗೆ ಹ್ಯಾಷ್'ಟ್ಯಾಗ್ ಮಾಡುವಾಗ ಇಂಡಿಯಾಗೇಟ್ ಚಿಹ್ನೆಯುಳ್ಳ ಎಮೋಜಿ ಕಾಣಿಸಿಕೊಳ್ಳಲಿದೆ.

ಪ್ರತಿ ಗಣರಾಜ್ಯೋತ್ಸವದ ದಿನದಂದು ನವದೆಹಲಿಯ ಇಂಡಿಯಾ ಗೇಟ್ ಬಳಿ ಪ್ರಧಾನ ಮಂತ್ರಿಗಳು ಸೈನಿಕರ ಹುತಾತ್ಮ ಸ್ಥಳ ಅಮರ್ ಜವಾನ್ ಜ್ಯೋತಿ ಸ್ಥಳಕ್ಕೆ ನಮಿಸಿದ ನಂತರ ಮುಂದಿನ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ.

click me!