
ಬೆಂಗಳೂರು(ಜೂನ್ 01): ಆನೇಕಲ್'ನ ಬಿಜೆಪಿ ಮುಖಂಡ ಹರೀಶ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೀನಿನ ವಿಚಾರಕ್ಕೆ ಹರೀಶ್ ಕೊಲೆಯಾದರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಹತ್ಯೆಯಾದ ಹರೀಶ್ ಹಾಗೂ ಅವರ ಸಂಬಂಧಿ ರಾಜು ಮಧ್ಯೆ ಕಳೆದ 3 ದಿನಗಳ ಹಿಂದೆ ಗಲಾಟೆ ನಡೆದಿತ್ತು. ಸಂತೋಷ್ ಎಂಬಾತನ ಜಮೀನಿನ ಬಳಿ ಇರುವ ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಗಲಾಟೆ ನಡೆದಿದ್ದು ಈ ಸಂಬಂಧ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಸಂತೋಷ್'ಗೆ ಸೇರಿದ್ದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕರನ್ನು ಹರೀಶ್ ಮತ್ತು ಗೆಳೆಯರು ತಡೆಯುತ್ತಾರೆ. ಮೀನು ಹಿಡಿಯಬೇಡಿ ಎಂದು ಹೇಳಿದ್ದಕ್ಕೆ ರಾಜು, ಸಂತೋಷ್ ಮತ್ತು ಸೋದರರು ಕೋಪಗೊಳ್ಳುತ್ತಾರೆ. ಹರೀಶ್ ಬೇಡವೆಂದು ಹೇಳಿದರೂ ರಾಜು ಅಂಡ್ ಗ್ಯಾಂಗ್ ಮೀನು ಹಿಡಿಯಲು ಹೋಗುತ್ತಾರೆ. ಆನಂತರ, ಹರೀಶ್ ಮತ್ತು ರಾಜು ನಡುವೆ ವಾಗ್ವಾದ ನಡೆಯುತ್ತದೆ. ಇದೇ ಕಾರಣಕ್ಕೆ ಹತ್ಯೆ ನಡೆದಿದೆ ಅಂತ ಶಂಕಿಸಲಾಗಿದೆ. ಹತ್ಯೆಯ ನಂತರ ಹಂತಕರು "ಇನ್ಮುಂದೆ ನಮ್ಮದೇ ಹವಾ" ಎಂದು ಸಿನಿಮೀಯ ಡೈಲಾಗ್ ಹೊಡೆದರೆಂದು ಕೆಲ ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಿಜೆಪಿ ಮುಖಂಡ ಹರೀಶ್ ಬೆಳವಣಿಗೆಯನ್ನು ಸಹಿಸದ ಸಂತೋಷ್ ಹಾಗೂ ಗೆಳೆಯರಿಂದ ಹತ್ಯೆ ನಡೆದಿದೆ ಎನ್ನಲಾಗಿದೆ. ಹೊ ಹೊಸೂರು ರಸ್ತೆಯ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಗೇಟ್ ಬಳಿ 20ಕ್ಕೂ ಹೆಚ್ಚು ಬಾರಿ ಡ್ಯಾಗರ್ನಿಂದ ಚುಚ್ಚಿ ಭೀಕರವಾಗಿ ಹರೀಶ್ ಹತ್ಯೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.