ಕೋಮು ಗಲಭೆ: ಸಿಎಂ ಯೋಗಿ ವಿರುದ್ಧ ವಿಚಾರಣೆಗೆ ಅನುಮತಿ ನಿರಾಕರಿಸಿದ ಸರ್ಕಾರ

By Suvarna Web DeskFirst Published May 12, 2017, 1:59 AM IST
Highlights

ಗೋರಖ್‌'ಪುರದಲ್ಲಿ ನಡೆದ ಹಿಂದು- ಮುಸ್ಲಿಂ ಸಂಘರ್ಷ ವೇಳೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ.

ನವದೆಹಲಿ: 2007ರ ಗೋರಖ್‌ಪುರ ಗಲಭೆ ಪ್ರಕರಣ ಸಂಬಂಧ ಸಿಎಂ ಆದಿತ್ಯನಾಥ್‌ ವಿರುದ್ಧ ವಿಚಾರಣೆಗೆ ಮುಂದಾಗಿದ್ದ ಅಲಹಾಬಾದ್‌ ಹೈಕೋರ್ಟ್‌ಗೆ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ.

ಗೋರಖ್‌'ಪುರದಲ್ಲಿ ನಡೆದ ಹಿಂದು- ಮುಸ್ಲಿಂ ಸಂಘರ್ಷ ವೇಳೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಈ ವೇಳೆ ಜಿಲ್ಲಾಧಿಕಾರಿಯ ಆದೇಶದ ಹೊರತಾಗಿಯೂ ಅಂದಿನ ಸಂಸದ ಯೋಗಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

ಬಳಿಕ ಸ್ಥಳದಲ್ಲಿ ಭಾರೀ ಪ್ರಮಾಣದ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆ ಯಲ್ಲಿ ಯೋಗಿ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿ ದೂರು ನೀಡಲಾಗಿತ್ತು.

click me!