ಅತ್ಯಾಚಾರಗೈದು ಮನೆಯವರಿಗೆ ಕರೆಮಾಡಿ ಏನು ನಡೆದಿಲ್ಲವೆಂಬಂತೆ ಅದ್ಭುತವಾಗಿ ನಟಿಸಿದ್ದ ಪೊಲೀಸಪ್ಪ..!!!

Published : Jan 15, 2017, 11:39 PM ISTUpdated : Apr 11, 2018, 01:07 PM IST
ಅತ್ಯಾಚಾರಗೈದು ಮನೆಯವರಿಗೆ ಕರೆಮಾಡಿ ಏನು ನಡೆದಿಲ್ಲವೆಂಬಂತೆ ಅದ್ಭುತವಾಗಿ ನಟಿಸಿದ್ದ ಪೊಲೀಸಪ್ಪ..!!!

ಸಾರಾಂಶ

ಮಾನಸಿಕ ಅಸ್ವಸ್ಥೆಯಾಗಿರುವ ಯುವತಿ ಮೊನ್ನೆ ರಾತ್ರಿ ಕೂಡ ನೃಪತುಂಗ ಬಡಾವಣೆಯಲ್ಲಿರುವ ಅಂತರಸನಹಳ್ಳಿ ಬಳಿ ಬಂದಿದ್ದಾಳೆ. ಗೃಹರಕ್ಷಕ ದಳದ ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದ ASI ಉಮೇಶ್ ಆ ಯುವತಿಯನ್ನು ನೋಡಿದ್ದಾನೆ. ಯುವತಿ ಕಣ್ಣಿಗೆ ಬೀಳುತ್ತಿದ್ದಂತೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಠಾಣೆಗೆ ಕಳುಹಿಸಿದ ಉಮೇಶ್​​, ತಾನು ಸೇತುವೆ ಕೆಳಗೆ ಉಳಿದುಕೊಂಡಿದ್ದಾನೆ. ಬಳಿಕ ಈಶ್ವರ್ ಎಂಬಾತನಿಗೆ ಫೋನ್ ಮಾಡಿ ಗಾಡಿ ತರುವಂತೆ ಹೇಳಿದ ASI ಉಮೇಶ್​​, ಬೊಲೆರೋ ಜೀಪಿನಲ್ಲಿ ಅತ್ಯಾಚಾರ ನಡೆಸಿ ಕಾಮತೃಷೆ ತೀರಿಸಿಕೊಂಡಿದ್ದಾನೆ.  ​

ತುಮಕೂರು (ಜ.16):  ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಮೇಲೆ, ತುಮಕೂರು ಗ್ರಾಮಾಂತರ ಠಾಣೆಯ ASI ಮನೆಯವರಿಗೆ ಕರೆ ಮಾಡಿ ಏನೂ ನಡೆದಿಲ್ಲವೆಂಬಂತೆ ನಟಿಸಿರುವುದು ಫೋನ್ ಕರೆಯಿಂದ ಬಹಿರಂಗವಾಗಿದೆ.

ಇಷ್ಟಕ್ಕೂ ನಡೆದದ್ದೇನು..?

ಮಾನಸಿಕ ಅಸ್ವಸ್ಥೆಯಾಗಿರುವ ಯುವತಿ ಮೊನ್ನೆ ರಾತ್ರಿ ಕೂಡ ನೃಪತುಂಗ ಬಡಾವಣೆಯಲ್ಲಿರುವ ಅಂತರಸನಹಳ್ಳಿ ಬಳಿ ಬಂದಿದ್ದಾಳೆ. ಗೃಹರಕ್ಷಕ ದಳದ ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದ ASI ಉಮೇಶ್ ಆ ಯುವತಿಯನ್ನು ನೋಡಿದ್ದಾನೆ. ಯುವತಿ ಕಣ್ಣಿಗೆ ಬೀಳುತ್ತಿದ್ದಂತೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಠಾಣೆಗೆ ಕಳುಹಿಸಿದ ಉಮೇಶ್​​, ತಾನು ಸೇತುವೆ ಕೆಳಗೆ ಉಳಿದುಕೊಂಡಿದ್ದಾನೆ.

ಬಳಿಕ ಈಶ್ವರ್ ಎಂಬಾತನಿಗೆ ಫೋನ್ ಮಾಡಿ ಗಾಡಿ ತರುವಂತೆ ಹೇಳಿದ ASI ಉಮೇಶ್​​, ಬೊಲೆರೋ ಜೀಪಿನಲ್ಲಿ ಅತ್ಯಾಚಾರ ನಡೆಸಿ ಕಾಮತೃಷೆ ತೀರಿಸಿಕೊಂಡಿದ್ದಾನೆ.  ​

ಅತ್ಯಾಚಾರ ನಡೆಸಿದ ಬಳಿಕ ಉಮೇಶ್ ಯುವತಿಯಿಂದ ಅಣ್ಣನ ಫೋನ್​​​ ನಂಬರ್​​ ತೆಗೆದುಕೊಂಡು ಕರೆ ಮಾಡಿದ್ದಾನೆ. ಯುವತಿಯ ತಾಯಿಯೊಂದಿಗೆ ಮಾತನಾಡಿ,  ಬಳಿಕ ಮನೆಯ ಬಳಿ ಕರೆ ತರುವುದಾಗಿ ಕೂಡಾ ಹೇಳಿದ್ದಾನೆ.

ಮನೆಗೆ ಹೋದ ಯುವತಿ ಪೊಲೀಸರು ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾಳೆ, ಅನುಮಾನ ಬಂದ ಕುಟುಂಬಸ್ಥರು ಇನ್ನೊಮ್ಮೆ ಯುವತಿಯನ್ನು ವಿಚಾರಿಸಿದ್ದಾರೆ.

ನಿನ್ನೆ ಮಧ್ಯಾಹ್ನದ ವೇಳೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ತುಮಕೂರು ಎಸ್.​​ಪಿ. ಇಶಾ ಪಂತ್ ಮಹಿಳಾ ಠಾಣೆಗೆ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದಾರೆ. ಖಾಸಗಿ ವಾಹನ ಚಾಲಕ ಈಶ್ವರ್ ಹಾಗೂ ASI ಉಮೇಶ್​ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!