100 ಶತಕೋಟಿ ತಲುಪಿದ ದೇಶದ ಮೊದಲ ಕಂಪನಿ ಟಿಸಿಎಸ್

Published : Apr 24, 2018, 10:37 AM IST
100 ಶತಕೋಟಿ ತಲುಪಿದ ದೇಶದ ಮೊದಲ ಕಂಪನಿ ಟಿಸಿಎಸ್

ಸಾರಾಂಶ

100 ಶತಕೋಟಿ ಡಾಲರ್‌ನಷ್ಟು ಮಾರುಕಟ್ಟೆ ಬಂಡವಾಳ ಹೊಂದುವುದರೊಂದಿಗೆ ಟಾಟಾ ಸಮೂಹದ ಟಿಸಿಎಸ್ ಸಾಫ್ಟ್‌ವೇರ್ ಕಂಪನಿ ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. 

ನವದೆಹಲಿ (ಏ. 24):  100 ಶತಕೋಟಿ ಡಾಲರ್‌ನಷ್ಟು ಮಾರುಕಟ್ಟೆ ಬಂಡವಾಳ ಹೊಂದುವುದರೊಂದಿಗೆ ಟಾಟಾ ಸಮೂಹದ ಟಿಸಿಎಸ್ ಸಾಫ್ಟ್‌ವೇರ್ ಕಂಪನಿ ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. 

100 ಶತಕೋಟಿ ಡಾಲರ್ (6,80,912 ಕೋಟಿ ರು.) ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ದೈತ್ಯ ಕಂಪನಿ’ ಎಂದು ಗುರುತಿಸಲು ಅನೌಪಚಾರಿಕವಾಗಿ ಬಳಸುವ ಮಾನದಂಡ. 

ಟಿಸಿಎಸ್ ಕಂಪನಿ ಕಳೆದ 14 ತ್ರೈಮಾಸಿಕಗಳಲ್ಲಿ ಸತತವಾಗಿ ಭಾರಿ ಪ್ರಮಾಣದಲ್ಲಿ ಲಾಭ ಗಳಿಸುತ್ತಿದೆ. ಕಳೆದ ವಾರ ಪ್ರಕಟವಾದ  ತ್ರೈಮಾಸಿಕದಲ್ಲೂ ಶೇ.4.4 ರಷ್ಟು ನಿವ್ವಳ ಲಾಭ ಗಳಿಸಿದೆ. ಬಾಂಬೆ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಮತ್ತಷ್ಟು ಏರಿದ ಟಿಸಿಎಸ್ ಷೇರುಗಳ ಬೆಲೆ ಮಧ್ಯಂತರ ವಹಿವಾಟಿನನಲ್ಲಿ ಶೇ.4.39 ರಷ್ಟು ಏರಿ 3557 ರು. ತಲುಪಿತ್ತು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ