ರಘುರಾಮ್ ರಾಜನ್ ಬ್ಯಾಂಕ್ ಆಫ್ ಇಂಗ್ಲೆಂಡ್’ಗೆ ಗವರ್ನರ್?

First Published Apr 24, 2018, 10:13 AM IST
Highlights

ಮೂರು ವರ್ಷಗಳ ಭಾರತೀಯ ರಿಸರ್ವ್ ಬ್ಯಾಂಕ್‌ನ  ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಘುರಾಂ ರಾಜನ್ ಅವರು ಬ್ರಿಟನ್'ನ ಕೇಂದ್ರೀಯ ಬ್ಯಾಂಕ್ ಆದ ಬ್ಯಾಂಕ್ ಆಫ್  ಇಂಗ್ಲೆಂಡ್ ಮುಖ್ಯಸ್ಥರ ಸ್ಪರ್ಧಾ
ಕಣದಲ್ಲಿದ್ದಾರೆ.

ಲಂಡನ್ (ಏ. 24): ಮೂರು ವರ್ಷಗಳ ಭಾರತೀಯ ರಿಸರ್ವ್ ಬ್ಯಾಂಕ್‌ನ  ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಘುರಾಂ ರಾಜನ್ ಅವರು ಬ್ರಿಟನ್'ನ ಕೇಂದ್ರೀಯ ಬ್ಯಾಂಕ್ ಆದ ಬ್ಯಾಂಕ್ ಆಫ್  ಇಂಗ್ಲೆಂಡ್ ಮುಖ್ಯಸ್ಥರ ಸ್ಪರ್ಧಾ
ಕಣದಲ್ಲಿದ್ದಾರೆ.

ಹಾಲಿ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ‌್ನರ್ ಆಗಿರುವ ಮಾರ್ಕ್ ಕಾರ‌್ನಿ, 2019 ರ  ಜೂನ್‌ವರೆಗೆ ತಮ್ಮ ಹುದ್ದೆಯಲ್ಲಿ ಇರಲಿದ್ದಾರೆ. ಅವರ ನಿವೃತ್ತಿ ಬಳಿಕ ಸೂಕ್ತ ವ್ಯಕ್ತಿಗಾಗಿ  ಹುಡುಕಾಟ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಅತ್ಯುನ್ನತ ಹುದ್ದೆಗೆ 5 ಸಂಭಾವ್ಯ ಅರ್ಥಶಾಸ್ತ್ರಜ್ಞರ ಪಟ್ಟಿಯೊಂದನ್ನು ಫೈನಾನ್ಷಿಯಲ್ ಟೈಮ್ಸ್  ಪ್ರಕಟಿಸಿದೆ. ಅದರಲ್ಲಿ ಆರ್‌ಬಿಐನ ಮಾರ್ಜಿ ಗವರ‌್ನರ್ ರಘುರಾಂ  ರಾಜನ್ ಹೆಸರು ಇದೆ.

ರಾಜನ್, ಅವರು ಅಂತಾರಾಷ್ಟ್ರೀಯ  ಅರ್ಥಶಾಸ್ತ್ರದಲ್ಲಿ ನೈಪುಣ್ಯತೆ ಹೊಂದಿದ್ದು, ಭಾರತೀಯ ರಿಸರ್ವ್  ಬ್ಯಾಂಕ್ ಅಧ್ಯಕ್ಷರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಇದು ಅವರಿಗೆ  ಪ್ಲಸ್ ಪಾಯಿಂಟ್ ಆಗಿದೆ ಎಂದು ಹೇಳಲಾಗಿದೆ.  

click me!