ಬಾಹ್ಯಾಕಾಶಕ್ಕೆಂದೇ ಪಡೆ: ಅಮೆರಿಕದ ಹೊಸ ನಡೆ!

First Published Jun 20, 2018, 10:06 AM IST
Highlights

ಅಂತರಿಕ್ಷ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕ ಸೇನೆಯಲ್ಲಿ ಪ್ರತ್ಯೇಕ ‘ಬಾಹ್ಯಾಕಾಶ ಪಡೆ’ಯೊಂದನ್ನು ಸ್ಥಾಪಿಸುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

ಭೂಸೇನೆ, ವಾಯುಸೇನೆ, ನೌಕಾಸೇನೆ ಸಾಮಾನ್ಯವಾಗಿರುವ ವಿಶ್ವದಲ್ಲಿ ‘ಬಾಹ್ಯಾಕಾಶ ಸೇನೆ’ ಎಂಬ ಪರಿಕಲ್ಪನೆಯೇ ಹೊಸತು. ಈ ಪಡೆ ಹೇಗೆ ಇರಲಿದೆ, ಯಾವ ಕೆಲಸಗಳನ್ನು ಮಾಡಲಿದೆ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ಟ್ರಂಪ್‌ ಅವರು ನೀಡಿಲ್ಲ. ವಾಯುಪಡೆಗೆ ಸರಿಸಮಾನವಾಗಿರಲಿರುವ ಈ ಪಡೆ, ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ ಎಂದಷ್ಟೇ ಹೇಳಿದ್ದಾರೆ.

ವಾಷಿಂಗ್ಟನ್‌ (ಜೂ. 20):  ಅಂತರಿಕ್ಷ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕ ಸೇನೆಯಲ್ಲಿ ಪ್ರತ್ಯೇಕ ‘ಬಾಹ್ಯಾಕಾಶ ಪಡೆ’ಯೊಂದನ್ನು ಸ್ಥಾಪಿಸುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

ಭೂಸೇನೆ, ವಾಯುಸೇನೆ, ನೌಕಾಸೇನೆ ಸಾಮಾನ್ಯವಾಗಿರುವ ವಿಶ್ವದಲ್ಲಿ ‘ಬಾಹ್ಯಾಕಾಶ ಸೇನೆ’ ಎಂಬ ಪರಿಕಲ್ಪನೆಯೇ ಹೊಸತು. ಈ ಪಡೆ ಹೇಗೆ ಇರಲಿದೆ, ಯಾವ ಕೆಲಸಗಳನ್ನು ಮಾಡಲಿದೆ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ಟ್ರಂಪ್‌ ಅವರು ನೀಡಿಲ್ಲ. ವಾಯುಪಡೆಗೆ ಸರಿಸಮಾನವಾಗಿರಲಿರುವ ಈ ಪಡೆ, ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ ಎಂದಷ್ಟೇ ಹೇಳಿದ್ದಾರೆ.

ಅಮೆರಿಕ ಸೇನೆ ಬಳಿ ಈಗಾಗಲೇ ಐದು ಪ್ರತ್ಯೇಕ ಪಡೆಗಳು ಇವೆ. ಅವೆಂದರೆ: ಭೂಸೇನೆ, ನೌಕಾಸೇನೆ, ವಾಯುಸೇನೆ, ಕರಾವಳಿ ಕಾವಲು ಪಡೆ ಹಾಗೂ ಮರೈನ್‌ ಕೋ​ರ್‍ಸ್. ಉದ್ದೇಶಿತ ಬಾಹ್ಯಾಕಾಶ ಪಡೆಯು ಸೇನೆಯ ಆರನೇ ಘಟಕವಾಗಲಿದೆ.

ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್‌ ಅವರು, ಇಡೀ ವಿಶ್ವವೇ ಈಗ ಅಮೆರಿಕದತ್ತ ನೋಡುತ್ತಿದೆ. ನಮ್ಮ ದೇಶವನ್ನು ಮತ್ತೆ ಗೌರವಿಸುತ್ತಿದೆ ಎಂದು ಹೇಳಿದರು.

ಚೀನಾ ಆಗಲೀ, ರಷ್ಯಾ ಆಗಲೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವುದನ್ನು ಸಹಿಸಲು ಆಗದು. ಹೀಗಾಗಿ ರಾಷ್ಟ್ರೀಯ ಸಂಸ್ಥೆಗಳು ಬಾಹ್ಯಾಕಾಶ ದಟ್ಟಣೆ ನಿಯಂತ್ರಣಕ್ಕೆ ಅತ್ಯಾಧುನಿಕ ಚೌಕಟ್ಟು ರೂಪಿಸಬೇಕು. ಬಾಹ್ಯಾಕಾಶದಲ್ಲಿ ಕೇವಲ ಅಮೆರಿಕದ ಉಪಸ್ಥಿತಿ ಇದ್ದರಷ್ಟೇ ಸಾಕಾಗುವುದಿಲ್ಲ. ಅಲ್ಲಿ ನಮ್ಮ ಪ್ರಾಬಲ್ಯವಿರಬೇಕು ಎಂದು ಅಧಿಕಾರಿಗಳಿಗೆ ಟ್ರಂಪ್‌ ತಾಕೀತು ಮಾಡಿದರು.

ಪ್ರತ್ಯೇಕ ಬಾಹ್ಯಾಕಾಶ ಪಡೆ ರಚನೆ ಮಾಡಲು ರಕ್ಷಣಾ ಇಲಾಖೆಗೆ ಟ್ರಂಪ್‌ ಆದೇಶಿಸಿದ್ದರೂ ಈ ಕುರಿತು ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಬೇಕಾಗುತ್ತದೆ. ಕಳೆದ ವರ್ಷ ಟ್ರಂಪ್‌ ಮುಂದಿಟ್ಟಿದ್ದ ಇಂಥದ್ದೇ ಪ್ರಸ್ತಾಪವನ್ನು ಸಂಸತ್‌ ತಿರಸ್ಕರಿಸಿತ್ತು. 

click me!