
ವಾಷಿಂಗ್ಟನ್: ಅಮೆರಿಕಾದ ದರಗಳಿಗೆ ತಕ್ಕಂತೆ ಒಗ್ಗಿಕೊಳ್ಳದಿದ್ದರೆ, ತಾನು ಕೂಡಾ ‘ಪ್ರತಿ ತೆರಿಗೆ’ ವಿಧಿಸುವುದಾಗಿ ಭಾರತ ಹಾಗೂ ಚೀನಾಕ್ಕೆ ಅಮೆರಿಕಾವು ಬೆದರಿಕೆ ಹಾಕಿದೆ.
ಭಾರತವು ಅಮೆರಿಕಾದಿಂದ ಆಮದಾಗುವ ಹಾರ್ಲೆ & ಡೇವಿಡ್’ಸನ್’ನಂತಹ ಹೈ-ಎಂಡ್ ಬೈಕ್’ಗಳಿಗೆ ಶೇ. 50 ತೆರಿಗೆಯನ್ನು ವಿಧಿಸುತ್ತಿದೆ. ಆದರೆ ಅಮೆರಿಕಾವು ಭಾರತದಿಂದ ಆಮದು ಮಾಡುವ ಬೈಕುಗಳಿಗೆ ಯಾವುದೇ ತೆರಿಗೆಯನ್ನು ವಿಧಿಸುತ್ತಿಲ್ಲವೆಂದು ಟ್ರಂಪ್ ಇತ್ತೀಚೆಗೆ ಹೇಳುತ್ತಲೇ ಬಂದಿದ್ದಾರೆ.
ಚೀನಾವು ನಮಗೆ ಶೇ.25ರಷ್ಟು, ಭಾರತವು ಶೇ.75ರಷ್ಟು ಸುಂಕವನ್ನು ವಿಧಿಸುತ್ತಿದೆ. ಆದರೆ ನಾವು ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ. ಆದರೆ ಇನ್ಮುಂದೆ ನಾವು ಕೂಡಾ ಪ್ರತಿ-ತೆರಿಗೆಯನ್ನು ವಿಧಿಸಲಿದ್ದೇವೆ, ಎಂದು ಟ್ರಂಪ್ ಹೇಳಿದ್ದಾರೆ.
ಇತರರು ಎಷ್ಟು ಶುಲ್ಕವನ್ನು ವಿಧಿಸುತ್ತಾರೋ ನಾವು ಕೂಡಾ ಇನ್ಮುಂದೆ ಅಷ್ಟೇ ಶುಲ್ಕವನ್ನು ವಿಧಿಸಲಿದ್ದೇವೆ. ತನ್ನ ಒಂದು ವರ್ಷದ ಆಡಳಿತಾವಧಿಯಲ್ಲಿ ‘ಪ್ರತಿ-ತೆರಿಗೆ’ ವಿಧಿಸುವುದಕ್ಕಾಗಿ ವೇದಿಕೆ ಸಿದ್ಧವಾಗಿದೆ, ಎಂದು ಟ್ರಂಪ್ ಹೇಳಿದ್ದಾರೆ.
ಇತರ ದೇಶಗಳು ಅಮೆರಿಕನ್ ಕಂಪನಿಗಳನ್ನು ಸರಿಯಾಗಿ ವ್ಯವಹರಿಸುತ್ತಿಲ್ಲ, ಪ್ರತಿ-ತೆರಿಗೆ ವಿಧಿಸುವುದರಿಂದ ಅಮೆರಿಕಾ-ಸ್ನೇಹಿ ಉದ್ಯಮಕ್ಕೆ ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.