
ಸಾಮಾನ್ಯವಾಗಿ ಶ್ವಾನಗಳನ್ನು ವಿಶ್ವಾಸಕ್ಕೆ ಹೆಚ್ಚು ಹೋಲಿಸುತ್ತಾರೆ. ಸ್ವಲ್ಪ ಆಹಾರ ಅಥವಾ ಪ್ರೀತಿ ತೋರಿಸಿದರೆ ವ್ಯಕ್ತಿ ಯಾರಾದರೇನು ಅವರ ಜೊತೆಗೆ ಹೆಚ್ಚು ಸಲಿಗೆ ತೋರಿಸುತ್ತವೆ. ಬ್ರೆಜಿಲ್ ದೇಶದಲ್ಲಿ ಮಾಲೀಕನ ಮೇಲೆ ಶ್ವಾನವೊಂದು ತೋರಿಸಿದ ವಿಶ್ವಾಸ ಎಲ್ಲಡೆ ವೈರಲ್ ಆಗಿದೆ.
ಬ್ರೆಜಿಲ್'ನ ಪಟ್ಟಣದಲ್ಲಿ 59 ವರ್ಷದ ವ್ಯಕ್ತಿಯೊಬ್ಬನನ್ನು ಅಪರಿಚಿತರು ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಈತನನ್ನು ಆಸ್ಪತ್ರೆಯ ಸಿಬ್ಬಂದಿ ಆಂಬ್ಯುಲೆನ್ಸ್'ನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈತ ವಿಶ್ವಾಸ ತೋರಿಸಿದ್ದ ನಾಯಿಯೊಂದು ಆಂಬ್ಯುಲೆನ್ಸ್ ಹಿಂದೆಯೇ ಓಡಿ ಆಸ್ಪತ್ರೆಗೆ ಧಾವಿಸಿದೆ.
ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಆದರೆ 4 ತಿಂಗಳಿನಿಂದಲೂ ಆಸ್ಪತ್ರೆಯನ್ನು ಬಿಟ್ಟು ಈ ಶ್ವಾನ ಕದಲುತ್ತಿಲ್ಲ. ದ್ವಾರದಲ್ಲಿಯೇ ಕುಳಿತುಕೊಳ್ಳಿತ್ತಿದೆ. ಸ್ವಯಂಸೇವಾ ಸಂಘಟನೆಯೊಂದು ಬೇರೆ ಮನೆಯನ್ನು ಸೇರಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೂರ್ನಾಲ್ಕು ಕಿ.ಮೀ ದೂರ ಬಿಟ್ಟುಬಂದರೂ ಮತ್ತೆ ಅದೇ ಆಸ್ಪತ್ರೆಗೆ ಬಂದು ಕುಳಿತುಕೊಳ್ಳುತ್ತಿದೆ. ಕನಿಕರ ತೋರಿಸುತ್ತಿರುವ ಅಲ್ಲಿನ ಸಿಬ್ಬಂದಿ ಆಹಾರ ನೀಡುವ ಜೊತೆಗೆ ಚಳಿಯಿಂದ ರಕ್ಷಿಸಿಕೊಳ್ಳಲು ಮೆತ್ತನೆಯ ಹೊದಿಕೆಯನ್ನು ಹಾಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.