ಪ್ರಧಾನಿ ಮೋದಿಗೆ ವಧು ಹೊಂದಿಸುವೆ

Published : Aug 14, 2018, 11:31 AM ISTUpdated : Sep 09, 2018, 09:26 PM IST
ಪ್ರಧಾನಿ ಮೋದಿಗೆ ವಧು ಹೊಂದಿಸುವೆ

ಸಾರಾಂಶ

ಟ್ರಂಪ್‌ ಜಾಗತಿಕ ನಾಯಕರ ಜೊತೆ ‘ರಾಜತಾಂತ್ರಿಕ ಸಂಪ್ರದಾಯಭಂಗ’ ಮಾಡಿದ ಘಟನೆಗಳ ಉಲ್ಲೇಖವುಳ್ಳ ಲೇಖನವೊಂದರಲ್ಲಿ ಪ್ರಧಾನಿ ಮೋದಿ ತಾವು ವಧು ಹೊಂದಿಸುವುದಾಗಿ ಹೇಳಿದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘ ಕಾಲದಿಂದ ಪತ್ನಿ ತೊರೆದಿದ್ದಾರೆ ಎಂಬ ವಿಷಯ ತಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಪ್ರಧಾನಿಗೆ ವಧು ಹೊಂದಿಸಿ ಕೊಡುವುದಾಗಿ ತಮಾಷೆ ಮಾಡಿದ್ದರೆಂದು ಹೇಳಲಾಗಿದೆ. 

ಟ್ರಂಪ್‌ ಜಾಗತಿಕ ನಾಯಕರ ಜೊತೆ ‘ರಾಜತಾಂತ್ರಿಕ ಸಂಪ್ರದಾಯಭಂಗ’ ಮಾಡಿದ ಘಟನೆಗಳ ಉಲ್ಲೇಖವುಳ್ಳ ಲೇಖನವೊಂದರಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. 

ಕಳೆದ ವರ್ಷ ಅಮೆರಿಕ ಪ್ರವಾಸದ ಸಂದರ್ಭ, ಮೋದಿ ತಮ್ಮ ಪತ್ನಿಯೊಂದಿಗೆ ಬರುತ್ತಿಲ್ಲ ಎಂದು ಆಪ್ತರು ಹೇಳಿದಾಗ ಟ್ರಂಪ್‌, ‘ಓ, ನಾನು ಅವರಿಗೆ ಯಾರನ್ನಾದರೂ ಹೊಂದಿಸಿ ಕೊಡಬಲ್ಲೆ’ ಎಂದಿದ್ದಾರೆ. 

ಅಲ್ಲದೆ, ಟ್ರಂಪ್‌ಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಬಗ್ಗೆಯೂ ಹೆಚ್ಚು ಸ್ಪಷ್ಟತೆಯಿದ್ದಂತಿಲ್ಲ. ದಕ್ಷಿಣ ಏಷ್ಯಾದ ನಕಾಶೆ ನೋಡಿ, ಅವರು ಇಲ್ಲಿನ ದೇಶಗಳನ್ನು ಗುರುತಿಸಿದ್ದರು. ಈ ವೇಳೆ ನೇಪಾಳವನ್ನು ‘ನಿಪ್ಪಲ್‌’ ಮತ್ತು ಭೂತಾನ್‌ ಅನ್ನು ‘ಬಟನ್‌’ ಎಂದು ಉಚ್ಚರಿಸಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌