ಅಮೆರಿಕದಿಂದ ಹೊಸ ವಲಸೆ ನೀತಿ ಜಾರಿ : ಭಾರತದ ಮೇಲೆ ಗಂಭೀರ ಪರಿಣಾಮ

By Suvarna Web DeskFirst Published Feb 23, 2018, 2:21 PM IST
Highlights

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ ತನ್ನ ವಲಸೆ ನೀತಿ ಜಾರಿ ಮಾಡಲು ನಿರ್ಧಾರ ಮಾಡಿದೆ.  ಇದರಿಂದ ಎಚ್’1ಬಿ ವೀಸಾ ನೀತಿ ಇನ್ನಷ್ಟು ಕಠಿಣವಾಗಲಿದೆ.

ನವದೆಹಲಿ : ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ ತನ್ನ ವಲಸೆ ನೀತಿ ಜಾರಿ ಮಾಡಲು ನಿರ್ಧಾರ ಮಾಡಿದೆ.  ಇದರಿಂದ ಎಚ್’1ಬಿ ವೀಸಾ ನೀತಿ ಇನ್ನಷ್ಟು ಕಠಿಣವಾಗಲಿದೆ.

ಅಮೆರಿಕದ ಕಂಪನಿಗಳು ತನ್ನ ಕೆಲಸಕ್ಕೆ ಮೂರನೇ ಸಂಸ್ಥೆಗಳ  ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆ ನೀತಿ 2018ರಲ್ಲಿರುವ ಮಾನದಂಡತೆ ವಿದೇಶಿ ಉದ್ಯೋಗಿಗಳಿಗೆ ಎಚ್’1ಬಿ ವೀಸಾ ನೀಡಲು ಮುಂದಾಗಿದೆ. ಅಮೆರಿಕದ   ಹೊಸದಾದ ನೀತಿಯಿಂದ ವಿದೇಶದಿಂದ ಅಮೆರಿಕ್ಕೆ ಕೆಲಸಕ್ಕೆ ತೆರಳುವವರಿಗೆ ಎಚ್1 ಬಿ ವೀಸಾ ಪಡೆಯುವುದು ಕಷ್ಟವಾಗಲಿದೆ.

ಇದರಲ್ಲಿ ಅಮೆರಿಕದ ಉದ್ಯೋಗಿಗಳ ಕೊರತೆಯಾದರೆ ಮಾತ್ರ ಹೆಚ್ಚು ಶಿಕ್ಷಿತ ಹಾಗೂ ಕೌಶಲ್ಯವನ್ನು ಹೊಂದಿದವರನ್ನು ಕರೆಸಿಕೊಳ್ಳಲು ಮಾತ್ರ ಅವಕಾಶ ದೊರಕಲಿದೆ.

click me!