ಸರ್ಕಾರ ರಚಿಸುವ ಮುನ್ನವೇ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ಬಿಜೆಪಿ

By Suvarna Web DeskFirst Published Mar 6, 2018, 11:09 AM IST
Highlights

ತ್ರಿಪುರಾ ಚುನಾವಣಾ ಫಲಿತಾಂಶ ಘೋಷಣೆಯಾದ 48 ತಾಸಿನೊಳಗೆ ಬಿಜೆಪಿ ಕಾರ್ಯಕರ್ತರು ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆಯನ್ನು ಬುಲ್ಡೋಜರ್’ನಿಂದ ನೆಲಸಮ ಮಾಡಿದ್ದಾರೆ. 

ತ್ರಿಪುರಾ (ಮಾ. ೦6): ತ್ರಿಪುರಾ ಚುನಾವಣಾ ಫಲಿತಾಂಶ ಘೋಷಣೆಯಾದ 48 ತಾಸಿನೊಳಗೆ ಬಿಜೆಪಿ ಕಾರ್ಯಕರ್ತರು ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆಯನ್ನು ಬುಲ್ಡೋಜರ್’ನಿಂದ ನೆಲಸಮ ಮಾಡಿದ್ದಾರೆ. 

ಬೆಲೋನಿಯಾ ನಗರದಲ್ಲಿರುವ ಸೆಂಟರ್ ಕಾಲೇಜಿನಲ್ಲಿ ಕಳೆದ 5 ವರ್ಷಗಳಿಂದ ಇರುವ ಲೆನಿನ್ ಪ್ರತಿಮೆಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಸಿಪಿಐ (ಎಂ) ನ ಅಬೇಧ್ಯ ಕೋಟೆಯಾಗಿರುವ ತ್ರಿಪುರಾದಲ್ಲಿ ಬಿಜೆಪಿ ಈ ಬಾರಿ ಜಯಭೇರಿ ಬಾರಿಸಿದೆ. ಬಿಜೆಪಿಯ ಈ ಗೆಲುವು ಕೇಸರಿ ಪಾಳಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ತಮ್ಮ ಈ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. 
ಎಡಪಂಥೀಯ ಆಳ್ವಿಕೆಯಿಂದ ತುಳಿತಕ್ಕೊಳಗಾದವರು ಅವರ ಐಕಾನ್ ಎನಿಸಿಕೊಂಡ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಸಮರ್ಥನೆ ನೀಡಿದೆ. 

 

 

 

click me!