
ನವದೆಹಲಿ, [ಮೇ.29]: ತೃಣಮೂಲ ಕಾಂಗ್ರೆಸ್ನ ಶಾಸಕ ಮನಿರುಲ್ ಇಸ್ಲಾಂ ಅವರು ಇಂದು [ಬುಧವಾರ] ಬಿಜೆಪಿಗೆ ಸೇರ್ಪಡೆಯಾದರು.
ದೀದಿಗೆ ಮೋದಿ ಏಟು, ಟಿಎಂಸಿ ತೊರೆದ ಇಬ್ಬರು ಶಾಸಕರು, 50 ಮುಖಂಡರು
ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೃಣಮೂಲ ಕಾಂಗ್ರೆಸ್ನ ಶಾಸಕ ಮನಿರುಲ್ ಇಸ್ಲಾಂ ಹಾಗೂ ಟಿಎಂಸಿಯ ಗಧಾದರ್ ಹಜ್ರಾ, ಮೊಹಮದ್ ಆಸಿಫ್ ಇಕ್ಬಾಲ್, ನಿಮಯಿ ದಾಸ್ ಅವರು ಬಿಜೆಪಿ ಸೇರಿದರು.
ನಿನ್ನೆ [ಮಂಗಳವಾರ] ಅಷ್ಟೇ ಟಿಎಂಸಿಯಿಂದ ವಜಾಗೊಂಡಿರುವ ಶಾಸಕ ಹಾಗೂ ಬಿಜೆಪಿ ಮುಖಂಡ ಮುಕುಲ್ ರಾಯ್ ಪುತ್ರ ಸುಭ್ರಾಂಗ್ಶು ರಾಯ್, ತುಷಾರ್ಕಾಂತಿ ಭಟ್ಟಾಚಾರ್ಯ, ಸಿಪಿಎಂನ ದೇವೇಂದ್ರನಾಥ ರಾಯ್ ಸೇರಿ ಮೂವರು ಶಾಸಕರು ಹಾಗೂ 50ಕ್ಕೂ ಅಧಿಕ ಕಾಪೋರೇಟರ್ಗಳು ಬಿಜೆಪಿ ಸೇರ್ಪಡೆಯಾಗಿದ್ದರು.
ಟಿಎಂಸಿಯ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಚುನಾವಣೆ ಪ್ರಚಾರದ ವೇಳೆ ಮೋದಿ ಹೇಳಿಕೆ ನೀಡಿದ್ದರು. ಜತೆಗೆ ಪಶ್ಚಿಮ ಬಂಗಾಳದ 143 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಮುಕುಲ್ ರಾಯ್ ತಿಳಿಸಿದ್ದರು.
ಮುಕುಲ್ ರಾಯ್ ಹೇಳಿಕೆ ನೀಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ವಲಸೆ ಪರ್ವ ಪ್ರಾರಂಭವಾಗಿದ್ದು, ಪಶ್ಚಿಮ ಬಂಗಾಳ ರಾಜ್ಯ ರಾಜಕಾರಣ ಭಾರೀ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.