
ರಾಯಪುರ, [ಮೇ.29]: ಪ್ರೀತಿ ಪಡೆಯಲು ಹಲವಾರು ಒಪ್ಪಂದಗಳನ್ನು ಮಾಡುತ್ತಾರೆ. ಛತ್ತೀಸ್ ಗಡದ ಮುಚನಾರ್ ನಲ್ಲಿ ನಡೆದ ಮದುವೆಯೊಂದು ಇಂತಹುದೇ ಒಪ್ಪಂದಕ್ಕೆ ಜೀವಂತ ಸಾಕ್ಷಿಯಾಗಿದೆ. ಹೌದು ವಧುಗಳಿಬ್ಬರು ಪರಸ್ಪರ ಒಪ್ಪಂದ ಮಾಡಿಕೊಂಡು ಒಬ್ಬನನ್ನೇ ವರಿಸಲು ಮುಂದಾಗಿದ್ದಾರೆ.
ಬೀರಬಲ್ ನಾಗ್ ಹಾಗೂ ಪ್ರತಿಭಾ ಎಂಬವರ ವಿವಾಹಕ್ಕೆ ಅದ್ಧೂರಿ ಸಿದ್ಧತೆ ನಡೆದಿತ್ತು. ಮನೆ ಮಂದಿ, ಕುಟುಂಬಸ್ಥರು, ನೆರೆ ಹೊರೆಯವರು ಈ ಮದುವೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮೀಯ ಶೈಲಿಯಲ್ಲಿ ಸುಮತಿ ಎಂಬಾಕೆ ಎಂಟ್ರಿ ಕೊಡುತ್ತಾಳೆ. ಈಕೆ ಯಾರು? ಎಂಬ ಪ್ರಶ್ನೆ ಮುಡುವುದು ಸಹಜಷ. ವಾಸ್ತವವಾಗಿ ಬೀರಬಲ್ ಹಾಗೂ ಸುಮತಿ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಸುಮತಿ ತನ್ನ ಪ್ರಿಯಕರನ ಮದುವೆಯಲ್ಲಿ ಅಚಾನಕ್ಕಾಗಿ ಎಂಟ್ರಿ ಕೊಡುತ್ತಾರೆ.
ಸಾಮಾನ್ಯವಾಗಿ ಮತ್ತೊಬ್ಬ ಯುವತಿ ಹೀಗೆ ಎಂಟ್ರಿ ಕೊಟ್ಟರೆ ಹಲವಾರು ಗೊಂದಲಗಳು ಏರ್ಪಡುತ್ತವೆ. ಮದುವೆಯೇ ನಿಂತು ಹೋಗುವ ಸಾಧ್ಯತೆಗಳೂ ಇರುತ್ತವೆ. ಆದರೆ ಇಲ್ಲಿಗಾಗಮಿಸಿದ ಜನರು, ಕುಟುಂಬಸ್ಥರು ಕೊಂಚ ವಿಭಿನ್ನವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಸಕಲ ಸಂಪ್ರದಾಯದೊಂದಿಗೆ ಸುಮತಿ ಹಾಗೂ ಪ್ರತಿಭಾ ಇಬ್ಬರೊಂದಿಗೂ ಬೀರಬಲ್ ಮದುವೆ ಮಾಡಿಕೊಟ್ಟಿದ್ದಾರೆ.
ಸುಮತಿ ಹಾಗೂ ಬೀರಬಲ್ ಹಲವಾರು ಸಮಯದಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರೆಂದು ಹೇಳಲಾಗಿದೆ. ಆದರೆ ಕೆಲ ಮನಸ್ತಾಪಗಳಿಂದ ಇಬ್ಬರೂ ದೂರವಾಗಿದ್ದರು. ಇದಾದ 2 ವರ್ಷಗಳ ಬಳಿಕ ಬೀರಬಲ್ ಮದುವೆ ಪ್ರತಿಭಾ ಜೊತೆ ನಿಶ್ಚಯವಾಗಿತ್ತು.
ಈ ವೇಳೆ ಬೇರೇನನ್ನೂ ಯೋಚಿಸದ ಸುಮತಿ ತನ್ನ ಪ್ರಿಯಕರನಿಗಾಗಿ ಮರಳಿ ಬಂದಿದ್ದರು. ವಿಚಾರ ತಿಳಿದ ಹಿರಿಯರು ಸಮಾಧಾನದಿಂದ ಯೋಚಿಸಿ, ಮಾತುಕತೆ ನಡೆಸಿ ಕೊನೆಗೆ ಇಬ್ಬರನ್ನೂ ಮದುವೆ ಮಾಡಿಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಯುವತಿಯರು ಇದಕ್ಕೆ ಒಪ್ಪಿದ್ದೇ ತಡ ಮದುವೆಯೂ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.