ಮುಸ್ಲಿಂಮರನ್ನು ಸೋದರರಂತೆ ನೋಡಿ, ವೋಟ್ ಬ್ಯಾಂಕ್ ಎಂದು ಪರಿಗಣಿಸಬೇಡಿ: ಮೋದಿ

By Internet DeskFirst Published Sep 25, 2016, 3:56 PM IST
Highlights

ಕಲ್ಲಿಕೋಟೆ(ಸೆ.25): ಮುಸ್ಲಿಂಮರನ್ನು ವೋಟ್ ಬ್ಯಾಂಕ್ ಎಂದು ಪರಿಗಣಿಸಬೇಡಿ ಅವರನ್ನು ನಿಮ್ಮ ಸೋದರರಂತೆ ಕಂಡು ಸಬಲೀಕರಣಗೊಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕೇರಳದ ಕಲ್ಲಿಕೋಟೆಯಲ್ಲಿ ಕೇರಳ ಬಿಜೆಪಿ ಏರ್ಪಡಿಸಿದ್ದ ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ಜನ್ಮಶತಮಾನೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Latest Videos

ಮುಸ್ಲಿಂ ಸಮುದಾಯವನ್ನು ನಿಂದಿಸುವುದು, ವೋಟ್ ಬ್ಯಾಂಕ್ ಅಥವಾ ಸರಕುಗಳಂತೆ ನೋಡುವುದನ್ನು ಬಿಟ್ಟು ಅವರನ್ನು ಸಬಲೀಕರಣಗೊಳಿಸಿ ಎಂದು ದೀನ್ ದಯಾಳ್ ಅವರ ವ್ಯಾಖ್ಯಾನವನ್ನು ಸ್ಮರಿಸಿದರು. ಕೇಂದ್ರ ಸರ್ಕಾರದ ಉದ್ದೇಶ ಎಲ್ಲರ ಜೊತೆ ಎಲ್ಲರ ವಿಕಾಸ ಹಾಗೂ ಕೆಳಸ್ತರದಲ್ಲಿರುವವರನ್ನು ಅಭಿವೃದ್ಧಿಗೊಳಿಸಿ ಸಮಾನತೆ ದೊರಕಿಸುವುದಾಗಿದೆ ಎಂದರು.

ಬಿಜೆಪಿಯು ಕೇರಳದಲ್ಲಿ ರಾಜಕೀಯ ಪ್ರಾಬಲ್ಯ ಪಡೆಯಲು ಮೋದಿ ಭೇಟಿ ಹೆಚ್ಚು ಪರಿಣಾಮಕಾರಿಯಾಗಿದೆ. ಅದಲ್ಲದೆ ಕಮ್ಯುನಿಸ್ಟ್ ಪ್ರಾಬಲ್ಯದ ಈ ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿತ್ತು.

click me!