ಕೇರಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಆರಂಭ

By Web DeskFirst Published Aug 21, 2018, 8:44 AM IST
Highlights

ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಕೇರಳ- ಬೆಂಗಳೂರು ರೈಲು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೀಗ ಮತ್ತೆ ರೈಲು ಸಂಚಾರ ಪುನರ್ ಆರಂಭವಾಗಿದೆ. ಮಂಗಳೂರು ಮೂಲಕ ರೈಲು ಸಂಚಾರವನ್ನು ಆರಂಭಿಸಲಾಗಿದೆ. 

ಮಂಗಳೂರು: ಮಂಗಳೂರು ಮೂಲಕ ಬೆಂಗಳೂರಿಗೆ ಕೇರಳ ಮಾರ್ಗವಾಗಿ ರೈಲು ಪ್ರಯಾಣ ಆರಂಭವಾಗಿದೆ. ಕಾರವಾರ- ಮಂಗಳೂರು-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (ನಂ. 16514/ 16512) ರೈಲು ಶೊರ್ನೂರು- ಪಾಲಕ್ಕಾಡ್‌-ತಿರುಪತ್ತೂರು ಜಂಕ್ಷನ್‌ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್‌ (ನಂ.16528) ಸೋಮವಾರ ಸಂಜೆ 6.05ಕ್ಕೆ ಕಣ್ಣೂರು ನಿಲ್ದಾಣದಿಂದ ಪ್ರಯಾಣ ಆರಂಭಿಸಿದೆ. ಮಂಗಳೂರು ಸೆಂಟ್ರಲ್‌-ಯಶವಂತಪುರ ರೈಲು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.15ಕ್ಕೆ ಸಂಚಾರ ಆರಂಭಿಸಿದೆ.

Latest Videos

ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಮಧ್ಯಾಹ್ನ 12.50ಕ್ಕೆ ಹೊರಡಬೇಕಾಗಿದ್ದ ಮಂಗಳೂರು ಸೆಂಟ್ರಲ್‌ ಲೋಕಮಾನ್ಯ ತಿಲಕ್‌ ಮುಂಬೈ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ತಡವಾಗಿ ಸಂಜೆ 4.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಸಂಚಾರ ಆರಂಭಿಸಿದೆ. ಕೊಚುವೆಲಿ-ಚಂಡೀಗಡ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್‌ (ನಂ. 12217) ರಾತ್ರಿ 8.15ಕ್ಕೆ ಹಾಗೂ ಎರ್ನಾಕುಳಂ-ಹಝ್ರತ್‌ ನಿಜಾಮುದ್ದೀನ್‌ ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ರೈಲು ಸಂಜೆ 7.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟಿದೆ.

click me!