
ಬೀಜಿಂಗ್(ಅ.12): ಗುಂಡಿಗೆ ಗಟ್ಟಿ ಇರುವವರು ಮಾತ್ರ ಚೀನಾದ ಹುಬೈನಲ್ಲಿರೋ ಗಾಜಿನ ಸೇತುವೆ ಮೇಲೆ ನಡೆಯಲು ಸಾಧ್ಯ. ಯಾಕಂದ್ರೆ ನೀವು ನಡೆದಂತೆಲ್ಲ ಈ ಸೇತುವೆ ಮುರಿಯುತ್ತದೆ. ನೀವು ಮುಂದಕ್ಕೆ ಚಲಿಸಿದ ಮೇಲೆ ತಂತಾನೇ ಸರಿಹೋಗುತ್ತದೆ. ಈ ಹೊಸ ಫೀಚರ್ ಅನ್ನು ಗಾಜಿನ ಸ್ಕೈ ವಾಕ್'ಗೆ ಅಳವಡಿಸಲಾಗಿದೆ.
ಹೆಜ್ಜೆ ಇಟ್ಟಾಕ್ಷಣ ಬರುವ ಸದ್ದು, ಒಡೆಯುವ ಗಾಜು ಇದನ್ನೆಲ್ಲ ನೋಡಿ ಪ್ರವಾಸಿಗರು ಅರೆಕ್ಷಣ ನಡುಗಿ ಹೋಗ್ತಾರೆ. ಈ ಗಾಜಿನ ಸೇತುವೆ ನೆಲದಿಂದ 3800 ಅಡಿ ಎತ್ತರದಲ್ಲಿದೆ. ಅವರೋಹಿತ ಸೆನ್ಸಾರ್'ಗಳನ್ನು ಬಳಸಿ ಈ ರೀತಿಯ ಶಬ್ಧ ಹಾಗೂ ಕ್ರ್ಯಾಕಿಂಗ್ ಬರುವಂತೆ ಮಾಡಲಾಗಿದೆ. ಈ ಸೇತುವೆ 872 ಅಡಿ ಉದ್ದವಿದ್ದು, 6.6 ಅಡಿ ಅಗಲವಿದೆ. ಸೇತುವೆಯ ಕೊನೆಯಲ್ಲಿ ಈ ರೀತಿ ಭಯಾನಕ ಎಫೆಕ್ಟ್ 'ಗಳನ್ನು ಅಳವಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.