ಹಂಪಿ ವಿರೂಪಾಕ್ಷ ದೇವಾಲಯದ ಒಳಗೆ ಮದ್ಯದ ಬಾಟಲ್ ಪತ್ತೆ; ಸ್ಥಳಿಯರಿಂದ ಪ್ರತಿಭಟನೆ

By Suvarna Web DeskFirst Published Apr 20, 2017, 11:27 AM IST
Highlights

ಹಂಪಿ ವಿರೂಪಾಕ್ಷ ದೇವಾಲಯದ ಪ್ರಾಂಗಣದ ಒಳಗೆ ವಿದೇಶಿ ಪ್ರವಾಸಿಗರು ಮಧ್ಯದ ಬಾಟಲನ್ನು ತೆಗೆದುಕೊಂಡು ಹೋಗಿ ಸೇವಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು (ಏ.20): ಹಂಪಿ ವಿರೂಪಾಕ್ಷ ದೇವಾಲಯದ ಪ್ರಾಂಗಣದ ಒಳಗೆ ವಿದೇಶಿ ಪ್ರವಾಸಿಗರು ಮಧ್ಯದ ಬಾಟಲನ್ನು ತೆಗೆದುಕೊಂಡು ಹೋಗಿ ಸೇವಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿರೂಪಾಕ್ಷ ದೇವಾಲಯದ ಪ್ರಾಂಗಣದ ಒಳಗೆ ಮಧ್ಯವನ್ನು ನಿಷೇಧಿಸಲಾಗಿದೆ. ವಿದೇಶೀ ಪ್ರವಾಸಿಗನೊಬ್ಬ ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವ ಚಿತ್ರ ವೈರಲ್ ಆಗಿದ್ದು, ದೇವಸ್ಥಾನದ ಒಳಭಾಗದಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿದೇಶಿ ಪ್ರವಾಸಿಗ ಅಪರಿಚಿತನಾಗಿದ್ದು, ಹೋಲಂಡ್ ನವನು ಎಂದು ತಿಳಿದು ಬಂದಿದೆ. ಮೊದಲ ಬಾರಿಗೆ ಮದ್ಯದ ಬಾಟಲ್ ತಂದಾಗ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಲಾಗಿತ್ತು. ಎರಡನೇ ಬಾರಿಗೆ ಕದ್ದುಮುಚ್ಚಿ ತಂದಿದ್ದ ಎನ್ನಲಾಗಿದೆ.

 

click me!