'ಅನರ್ಹತೆ ವಿಚಾರಣೆ ಸುಪ್ರೀಂನಲ್ಲಿ: ಉಪಚುನಾವಣೆ ಡೌಟ್?'

By Web Desk  |  First Published Sep 21, 2019, 1:49 PM IST

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದು, ರಾಜೀನಾಮೆ ನೀಡಿರುವ ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಬಾಕಿ ಇದೆ. ಈ ಬೆನ್ನಲ್ಲೇ ರಾಜ್ಯದ ಉಪ ಚುನಾವಣೆಯ ದಿನಾಂಕವೂ ಪ್ರಕಟಗೊಂಡಿದ್ದು, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ಇದು.


ಚಿಕ್ಕಮಗಳೂರು (ಸೆ.21) : ರಾಜೀನಾಮೆ ನೀಡುವರ 17 ಶಾಸಕರ ವಿಧಾನಸಭಾ ಕ್ಷೇತ್ರಗಳ ಪೈಕಿ ಇದೀಗ ಬೆಂಗಳೂರಿನ ಆರ್‌ಆರ್ ನಗರ ಹಾಗೂ ಹಾವೇರಿ ಜಿಲ್ಲೆಯ ರಾಣಿಬೆನ್ನೊರು ಕ್ಷೇತ್ರಗಳನ್ನು ಹೊರತುಪಡಿಸಿ,  15 ಕೇತ್ರಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದೆ. ಅದರಿನ್ನೂ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವುದರಿಂದ ಉಪ ಚುನಾವಣೆ ನಡೆಯುವುದೇ ಅನುಮಾನವೆಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ. 

ಸುಪ್ರೀಂ ಕೋರ್ಟಿನ ತೀರ್ಪಿನ ಮೇಲೆ ಉಪ ಚುನಾವಣೆ ನಿಂತಿದೆ. ಉಪ ಚುನಾವಣೆಯ ಮೇಲೆ ಸುಪ್ರೀಂ ಕೋರ್ಟ್‌ ತೀರ್ಪು ಪರಿಣಾಮ ಬೀರುತ್ತದೆ, ಎಂದಿದ್ದಾರೆ ರವಿ. ಚುನಾವಣಾ ಆಯೋಗ ಉಪ  ಚುನಾವಣೆ ಘೋಷಿಸಿದೆ. 

Latest Videos

undefined

ಆದ್ರೆ ಉಪ ಚುನಾವಣೆಗೆ ಕೆಲವು ತಾಂತ್ರಿಕ ತೊಡಕುಗಳಿವೆ. ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಆದೇಶದ ಮೇಲೆ  ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇದೆ. ಈ ಸಮಯದಲ್ಲಿ ಸುಪ್ರೀಂ ನೀಡುವ ತೀರ್ಪಿನ ಮೇಲೆ ಈ ಚುನಾವಣೆಗಳು ನಡೆಯತ್ತೋ ಇಲ್ಲವೋ? ನಡೆದರೆ ಯಾವಾಗ ಎನ್ನುವುದರ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಚುನಾವಣೆಗೆ ಸದಾ ಸಿದ್ಧ. 
ಈ ಉಪಚುನಾವಣೆಗಳಿಗೆ ಮಾತ್ರವಲ್ಲ, ಸಂಘಟನೆಯ ಎಲ್ಲಾ ಹಂತದಲ್ಲೂ ತಯಾರಿ ನಡೆದಿರುತ್ತದೆ, ಎಂದು ರವಿ ಹೇಳಿದ್ದಾರೆ. 

ಉಪ ಚುನಾವಣೆಗೆ ಮೈತ್ರಿ ಇಲ್ಲ: ಕುಮಾರಸ್ವಾಮಿ

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. 

 

click me!