ದುರ್ಗಾ ಮಾತೆಗಾಗಿ ಸಂಸದೆಯರ ಡಾನ್ಸ್: ವೈರಲ್ ಆಯ್ತು ವಿಡಿಯೋ!

Published : Sep 21, 2019, 12:18 PM IST
ದುರ್ಗಾ ಮಾತೆಗಾಗಿ ಸಂಸದೆಯರ ಡಾನ್ಸ್: ವೈರಲ್ ಆಯ್ತು ವಿಡಿಯೋ!

ಸಾರಾಂಶ

ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ ಸಂಸದೆಯರ ಡಾನ್ಸ್| ದುರ್ಗಾ ಮಾತೆಯ ಆರಾಧನೆಗಾಗಿ ಸ್ಟೆಪ್ಸ್ ಹಾಕಿದ ನಟಿ ಕಂ ಸಂಸದೆಯರು| ದುರ್ಗಾ ಪೂಜೆ ನಿಮಿತ್ತ ಮಾಡಲಾದ ವಿಡಿಯೋ ಫುಲ್ ವೈರಲ್

ಕೋಲ್ಕತ್ತಾ[ಸೆ.21]: ನುಸ್ರತ್ ಜಹಾನ್ ಹಾಗೂ ಮಿಮಿ ಚಕ್ರವರ್ತಿಯ ನೃತ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿ ಟಿಎಂಸಿ ಪಕ್ಷದಿಂದ ಸಂಸದೆಯರಾಗಿ ಆಯ್ಕೆಯಾದ ಈ ಇಬ್ಬರು ಸಿನಿ ನಟಿಯರು ವಿಡಿಯೋದಲ್ಲಿ ಒಟ್ಟಾಗಿ ಕಂಡು ಬಂದಿದ್ದಾರೆ. 

ದುರ್ಗಾ ಪೂಜೆಯ ವಿಡಿಯೋ ಇದಾಗಿದ್ದು, ಇಬ್ಬರೂ ಸಂಸದೆಯರು ಮಾತೆ ದುರ್ಗೆಯನ್ನು ಆರಾಧಿಸಿ ನೃತ್ಯ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ದುರ್ಗಾ ಪೂಜೆ 4 ಅಕ್ಟೋಬರ್ ನಿಂದ 8ರವರೆಗೆ ನಡೆಯಲಿದೆ.

ನುಸ್ರತ್ ಬಂಗಾಳಿ ನಟಿ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಬಶೀರ್‌ಹಾಟ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನುಸ್ರತ್ ಸುಮಾರು 3.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇತ್ತ ಮಿಮಿ ಚಕ್ರವರ್ತಿ ಕೂಡಾ ಓರ್ವ ಬಂಗಾಳಿ ನಟಿ. ಇವರು ಜಾಧವ ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ