ಇಂದು ಲೆಸ್ ಟ್ರಾಫಿಕ್ ಡೇ ಆಚರಣೆ; ಇಂದು ಸಾರ್ವಜನಿಕ ಸಾರಿಗೆ ಬಳಸಿ

By Suvarna Web DeskFirst Published Feb 11, 2018, 10:30 AM IST
Highlights

ನಗರದಲ್ಲಿ ವಾಯುಮಾಲಿನ್ಯ ಮತ್ತು ವಾಹನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಆರಂಭಿಸುತ್ತಿರುವ ‘ವಿರಳ ಸಂಚಾರ ದಿನ’ಕ್ಕೆ ಭಾನುವಾರ ಬೆಳಗ್ಗೆ 9 ಗಂಟೆಗೆ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ವಿಧಾನಸೌಧದದಲ್ಲಿ ಚಾಲನೆ ನೀಡಿದ್ದಾರೆ. 

ಬೆಂಗಳೂರು (ಫೆ.11):  ನಗರದಲ್ಲಿ ವಾಯುಮಾಲಿನ್ಯ ಮತ್ತು ವಾಹನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಆರಂಭಿಸುತ್ತಿರುವ ‘ವಿರಳ ಸಂಚಾರ ದಿನ’ಕ್ಕೆ ಭಾನುವಾರ ಬೆಳಗ್ಗೆ 9 ಗಂಟೆಗೆ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ವಿಧಾನಸೌಧದದಲ್ಲಿ ಚಾಲನೆ ನೀಡಿದ್ದಾರೆ. 
ಈ ಕಾರ್ಯಕ್ರಮದಲ್ಲಿ ವಿರಳ ಸಂಚಾರ ದಿನದ ರಾಯಭಾರಿ ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭಾಗವಹಿಸಲಿದ್ದಾರೆ. ಸಚಿವರಾದ ಆರ್. ರೋಷನ್ ಬೇಗ್, ಕೆ.ಜೆ. ಜಾರ್ಜ್, ಆರ್.
ರಾಮಲಿಂಗಾರೆಡ್ಡಿ, ರಮಾನಾಥ ರೈ, ಮೇಯರ್ ಸಂಪತ್ ರಾಜ್, ವಿಧಾನ ಪರಿಷತ್ ಸದಸ್ಯಕೆ. ಗೋವಿಂದರಾಜು, ಸಂಸದ ಪಿ.ಸಿ. ಮೋಹನ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮತ್ತಿತರರು ಭಾಗವಹಿಸಲಿದ್ದಾರೆ.
ಬಿಎಂಟಿಸಿ ದೈನಿಕ ಪಾಸ್ ಅಗ್ಗ: ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಬಿಎಂಆರ್‌ಸಿಎಲ್ ಸಹಯೋಗದಲ್ಲಿ ಪ್ರತಿ ತಿಂಗಳ 2 ನೇ ಭಾನುವಾರ ವಿರಳ ಸಂಚಾರ ದಿನ ಆಚರಿಸಲಾಗುತ್ತಿದೆ. ಜನರು ತಮ್ಮ ಖಾಸಗಿ ವಾಹನಗಳನ್ನು ಬದಿಗಿರಿಸಿ ಸಮೂಹ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸುವುದು ಈ ವಿರಳ ಸಂಚಾರ ದಿನದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳಿಗೆ
ಜನರನ್ನು ಆಕರ್ಷಿಸಲು ಬಿಎಂಟಿಸಿ ಬಸ್ (ನಾನ್ ಎಸಿ ಬಸ್) ದೈನಿಕ ಪಾಸ್ ದರದಲ್ಲಿ 5 ರೂ. ರಿಯಾಯಿತಿ ಘೋಷಿಸಿದೆ. ಇನ್ನು ಮುಂದೆ ಪ್ರತಿ ತಿಂಗಳ ೨ ನೇ ಭಾನುವಾರ 70 ರೂ.ಗಳ ಪಾಸ್ 65 ರೂ.ಗೆ ಸಿಗಲಿದೆ. ಇದೇ ರೀತಿ ‘ನಮ್ಮ ಮೆಟ್ರೋ’ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಶೇ. 25 ರಷ್ಟು ರಿಯಾಯಿತಿ ಘೋಷಿಸಿದೆ.

click me!