ವ್ಯಾಲಂಟೖನ್ಸ್ ಡೇಗೆ ಏವಿಯೇಷನ್’ನಿಂದ ವಿಶೇಷಾವಕಾಶ; ವಿಮಾಣದಲ್ಲಿ ಹಾರಾಡುತ್ತಾ ಐ ಲವ್ ಯು ಅನ್ನಿ!

By Suvarna Web DeskFirst Published Feb 11, 2018, 10:16 AM IST
Highlights

ಹೃದಯಾಂತರಾಳದಲ್ಲಿ ಅಡಗಿರುವ ಮಧುರ ಭಾವನೆಗಳನ್ನು ಆಗಸದ ಮೋಡಗಳ ಮಧ್ಯೆ ಭಿನ್ನಹ  ಮಾಡಲು ಇದೋ ಇಲ್ಲಿದೆ ಸದಾವಕಾಶ!  ಮನದಲ್ಲಿ ಚಿಗುರಿದ ಪ್ರೀತಿಯನ್ನು ವಿಶಿಷ್ಟವಾಗಿ ಸದಾ ಹಸಿರಾಗಿರುವಂತೆ ನಿವೇದನೆ ಮಾಡಿಕೊಳ್ಳುವ ಅಪರೂಪದ ಅವಕಾಶ ಪ್ರೇಮಿಗಳ ದಿನದಂದು ಸಿಗಲಿದೆ.

ಬೆಂಗಳೂರು (ಫೆ.11): ಹೃದಯಾಂತರಾಳದಲ್ಲಿ ಅಡಗಿರುವ ಮಧುರ ಭಾವನೆಗಳನ್ನು ಆಗಸದ ಮೋಡಗಳ ಮಧ್ಯೆ ಭಿನ್ನಹ  ಮಾಡಲು ಇದೋ ಇಲ್ಲಿದೆ ಸದಾವಕಾಶ!  ಮನದಲ್ಲಿ ಚಿಗುರಿದ ಪ್ರೀತಿಯನ್ನು ವಿಶಿಷ್ಟವಾಗಿ ಸದಾ ಹಸಿರಾಗಿರುವಂತೆ ನಿವೇದನೆ ಮಾಡಿಕೊಳ್ಳುವ ಅಪರೂಪದ ಅವಕಾಶ ಪ್ರೇಮಿಗಳ ದಿನದಂದು ಸಿಗಲಿದೆ.

ತಂತ್ರಜ್ಞಾನದ ಜಗತ್ತಿನಲ್ಲಿ ಉಳಿದೆಲ್ಲ ಭಾವನೆಗಳನ್ನು ಹೇಗೆ ಬೇಕಾದರೂ ತಲುಪಿಸಬಹುದು, ಆದರೆ, ಪ್ರೇಮ ನಿವೇದನೆ ಮುಖಾಮುಖಿ ಆದಾಗ ಮಾತ್ರ. ಅದೊಂದು ಅದ್ಬುತ ಅನುಭವ. ಇಂತಹ ಅನುಭವ ಸಾಕಾರಗೊಳ್ಳಲು ಯುವ ಸಮುದಾಯಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಕೇಂದ್ರವು ಅವಕಾಶ ಕಲ್ಪಿಸಿದೆ. ಜಕ್ಕೂರು ಏರೋಡ್ರಮ್‌ನಲ್ಲಿ ಖಾಸಗಿ ವಿಮಾನಯಾನ ಸಂಸ್ಥೆ ‘ಅಲ್ಟಿವಿಯಾ ಏವಿಯೇಷನ್’  ಇದೇ ಮೊದಲ ಬಾರಿಗೆ ಫೆ. 14 ರಂದು ವಿಶಿಷ್ಟ  ಅವಕಾಶ ಕಲ್ಪಿಸಿದ್ದು, ಪ್ರೇಮಿಗಳು ವಿಮಾನದಲ್ಲಿ ಹಾರಾಡುತ್ತ ಮೋಡಗಳ ನಡುವೆ ಪ್ರೇಮ ನಿವೇದನೆ ಮಾಡಬಹುದು ಎಂದು ಅಲ್ಟಿವಿಯಾ ಏವಿಯೇಷನ್'ನ ಮುಖ್ಯಸ್ಥ ಕ್ಯಾಪ್ಟನ್ ಅಕ್ಷಯ್ ಪಾಟೀಲ್
‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ದೇಶದ ಇತರೆ ವೈಮಾನಿಕ ತರಬೇತಿ ಕೇಂದ್ರಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಆದರೆ, ಜಕ್ಕೂರು ಏರೋಡ್ರೊಮ್‌ನಲ್ಲಿ ಸಾರ್ವಜ ನಿಕರ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ಈ ಅವಕಾಶ ಸಹ ಪ್ರೇಮಿಗಳಿಗೆ ಸಹಕಾರಿಯಾಗಲಿದೆ. ವಿಮಾನದಲ್ಲಿ ಹಾರಾಡುವುದಕ್ಕೆ ಕನಿಷ್ಠ ಬೆಲೆ ನಿಗದಿ ಮಾಡಿದ್ದು, ಸಾಮಾನ್ಯ ವರ್ಗದವರಿಗೆ ಸಾಧ್ಯವಾಗಲಿದೆ. ಹಾಗಾಗಿ ಈ ಯೋಜನೆಯನ್ನು ಎಲ್ಲಾ ವರ್ಗದವರೂ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದರು.
ಕಳೆದ ಕೆಲ ದಿನಗಳಿಂದ ಜನ್ಮ ದಿನಾಚರಣೆ, ವಿವಾಹ ವಾರ್ಷಿಕೋತ್ಸವ ಹಾಗೂ ಪ್ರೇಮಿಗಳ ದಿನ ಆಚರಿಸಲು ವಿಮಾನದಲ್ಲಿ ಅವಕಾಶ ಕಲ್ಪಿಸಬೇಕು  ಎಂಬ ಮನವಿಗಳು ಬರುತ್ತಿವೆ. ಪರಿಣಾಮದಿಂದಾಗಿ ಇದೇ ಮೊದಲ ಬಾರಿಗೆ ಈ ಯೋಜನೆ ರೂಪಿಸಲಾಗಿದೆ. ಹದಿನೈದು ನಿಮಿಷ ಹಾಗೂ 30 ನಿಮಿಷಗಳಂತೆ ಎರಡು ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

click me!