ಇಂದು ನಟ ದರ್ಶನ್ ಮನೆ ತೆರವು ಸಾಧ್ಯತೆ

By Web DeskFirst Published Oct 22, 2016, 3:02 AM IST
Highlights

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ಭುಮಿ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಹೀಗಾಗಿ ತೆರವು ಯಾವಾಗ  ಎಂಬ ಪ್ರಶ್ನೆ ಕೇಳಿ ಬಂದಿದ್ದವು. ಸುವರ್ಣ ನ್ಯೂಸ್ ಕೂಡ ನಿರಂತರ ವರದಿ ಮಾಡುತ್ತಲೇ ಬಂದಿತ್ತು. ಕೊನೆಗೂ ಇದೀಗ ಒತ್ತುವರಿ ತೆರವಿನ ದಿನಾಂಕ ಬಂದೇ ಬಿಟ್ಟಿದೆ. ಜಿಲ್ಲಾಡಳಿತ 29 ಒತ್ತುವರಿದಾರರ ಮನೆಗಳನ್ನು ವಶಕ್ಕೆ ಪಡೆಯಲಿದೆ. ದರ್ಶನ್ ಮನೆ ಕೂಡ ವಶಕ್ಕೆ ಪಡೆಯಲಾಗುತ್ತಿದೆ ಎನ್ನುವುದು ಮೂಲಗಳ ಮಾಹಿತಿ.

ಬೆಂಗಳೂರು(ಅ.22): ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ಭುಮಿ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಹೀಗಾಗಿ ತೆರವು ಯಾವಾಗ  ಎಂಬ ಪ್ರಶ್ನೆ ಕೇಳಿ ಬಂದಿದ್ದವು. ಸುವರ್ಣ ನ್ಯೂಸ್ ಕೂಡ ನಿರಂತರ ವರದಿ ಮಾಡುತ್ತಲೇ ಬಂದಿತ್ತು. ಕೊನೆಗೂ ಇದೀಗ ಒತ್ತುವರಿ ತೆರವಿನ ದಿನಾಂಕ ಬಂದೇ ಬಿಟ್ಟಿದೆ. ಜಿಲ್ಲಾಡಳಿತ 29 ಒತ್ತುವರಿದಾರರ ಮನೆಗಳನ್ನು ವಶಕ್ಕೆ ಪಡೆಯಲಿದೆ. ದರ್ಶನ್ ಮನೆ ಕೂಡ ವಶಕ್ಕೆ ಪಡೆಯಲಾಗುತ್ತಿದೆ ಎನ್ನುವುದು ಮೂಲಗಳ ಮಾಹಿತಿ.

ಕೋರ್ಟ್​ ಮೆಟ್ಟಿಲೇರಿದ 44 ಒತ್ತುವರಿದಾರರು: ನಾಲ್ಕು ವಾರ ರಿಲೀಫ್

ಅಷ್ಟಕ್ಕೂ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿ ಸರ್ಕಾರಿ ಬಿ ಖರಾಬು ಭೂಮಿಗೆ ಸೇರಿದ 7.31 ಎಕರೆ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಲಾಗಿತ್ತು. ಈ ಪೈಕಿ ಒತ್ತುವರಿ ಮಾಡಿಕೊಂಡಿರುವ 69 ಮನೆಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಎಸ್.ಎಸ್.ಆಸ್ಪತ್ರೆ ಮೊದಲು ತಾತ್ಕಾಲಿಕ ತಡೆ ಪಡೆದಿತ್ತು. ಬಳಿಕ ನಿನ್ನೆ  ಐಡಿಯಲ್ ಹೋಮ್ಸ್ ಲೇಔಟ್ ನ 44 ಆಸ್ತಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಇವರ ಆಸ್ತಿಗಳನ್ನು ನಾಲ್ಕು ವಾರ ವಶಕ್ಕೆ ಪಡೆಯದಂತೆ ಜಿಲ್ಲಾಡಳಿತಕ್ಕೆ ಕೋರ್ಟ್ ನಿರ್ದೇಶಿಸಿ ಮತ್ತೊಮ್ಮೆ ದಾಖಲೆಗಳ ಪರಿಶೀಲನೆಗೆ ತಾಕೀತು ಮಾಡಿದೆ.

ಹೈಕೋರ್ಟ್​ ಮೊರೆ ಹೋದವರನ್ನು ಬಿಟ್ಟು ಇನ್ನುಳಿದ 29 ಆಸ್ತಿದಾರರ ಮನೆಗಳನ್ನು ಜಿಲ್ಲಾಡಳಿತ ಇಂದು ವಶಕ್ಕೆ ಪಡೆಯಲಿದೆ. ಇದೇ ವೇಳೆ ನಟ ದರ್ಶನ್ ಹೈಕೋರ್ಟ್ ಮೊರೆ ಹೋಗಿಲ್ಲ ಎನ್ನಲಾಗ್ತಿದೆ. ಇದು ನಿಜವೇ ಆಗಿದ್ದಲ್ಲಿ ದರ್ಶನ್ ಮನೆಯನ್ನೂ ಇಂದು ಜಿಲ್ಲಾಡಳಿತ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

 

 

click me!