
ಮಂಗಳೂರು(ಅ.22): ಹಾನಸ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಆಗ್ತಿರುವುದು ಉತ್ತಮ ವಿಚಾರ. ಆದರೆ ತಲೆ ತಗ್ಗಿಸುವ ವಿಚಾರ ಎಂದರೆ ಹೈವೇ ಹೆಸರಲ್ಲಿ ಭೂಸ್ವಾಧೀನ ಅಧಿಕಾರಿಗಳು ಭರ್ಜರಿ ಕಮಿಷನ್ ದಂಧೆಗೆ ಇಳಿದುಬಿಟ್ಟಿದ್ದಾರೆ. ರೈತರನ್ನು ಹಿಂಸಿಸಿ ಲಂಚ ಪೀಕುವ ಆಘಾತಕಾರಿ ಅಂಶ ನಮ್ಮ ಕವರ್'ಸ್ಟೋರಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ.
ರಾಷ್ಟ್ರೀಯ ಹೆದ್ದಾರಿ 48ರ ಹಾಸನ ಮಂಗಳೂರು ರಸ್ತೆ ಅಗಲೀಕರಣ ಹೆಸರಲ್ಲಿ ಭರ್ಜರಿ ಲೂಟಿಯಾಗುತ್ತಿದೆ. ಭೂಮಿ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡುತ್ತದೆ. ಆದರೆ ಪರಿಹಾರ ಕೊಡುವ ಅಧಿಕಾರಿಗಳು ಸಂತ್ರಸ್ತರಿಂದ 2 ರಿಂದ 10 ಪರ್ಸೆಂಟ್ ಕಮಿಷನ್ ಪಡೆದು ವಿತರಿಸುವುದು. ಇದು ಕವರ್ಸ್ಟೋರಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಈ ಕಮಿಷನ್ ದಂಧೆಯಲ್ಲಿ ಸರ್ವೇಯರ್ ರಂಗಸ್ವಾಮಿ, ಗಂಗಾಧರ್ ಪ್ರಮುಖ ಪಾತ್ರಧಾರಿಗಳು. ಇವರಿಗೆ ಸಹಾಯ ಆಯುಕ್ತ ಮಂಜುನಾಥ್ ಕೂಡ ಸಾಥ್ ಕೊಡುತ್ತಿರೋದು ಸ್ಪಷ್ಟವಾಗಿದೆ. ಲಂಚ ಕೊಡದಿದ್ದರೆ ಭೂಮಿ ಕಳದುಕೊಂಡವರಿಗೆ ಪರಿಹಾರವೇ ಸಿಗುತ್ತಿಲ್ಲ. ಅವರನ್ನು ಅಲೆದಾಡಿಸಿ ಹೈರಾಣಾಸುತ್ತಿದ್ದಾರೆ ಲಜ್ಜೆಗೆಟ್ಟ ಅಧಿಕಾರಿಗಳು. ಇಂಥಾ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಕೊಡಬೇಕಾದ ಜನಪ್ರತಿನಿಧಿಗಳು ಅವರ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಆರೋಪ ರೈತರದ್ದು.
ಈ ಭಾರೀ ಕಮಿಷನ್ ದಂಧೆಯ ಬಗ್ಗೆ ಸರ್ಕಾರ ತನಿಖೆ ನಡೆಸಿ ಭ್ರಷ್ಟರಿಗೆ ಶಿಕ್ಷೆ ಕೊಡಬೇಕು. ಇಲ್ಲದಿದ್ದರೆ ಹೈವೇ ದರೋಡೆಕೋರರಿಗೆ ಜನರೇ ಬುದ್ಧಿ ಕಲಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.