
ಬೆಂಗಳೂರು(ಮಾ.25): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಬಜೆಟ್ ಕುತೂಹಲ ಕೆರಳಿಸಿದೆ. ಬಜೆಟ್'ನಲ್ಲಿ ಏನೇನು ಇದೆ? ಪಾಲಿಕೆ ಬಜೆಟ್ ಸಾಧ್ಯತೆಯ ವಿವರ ಇಲ್ಲಿದೆ.
ಇಂದು ಬಿಬಿಎಂಪಿ ಬಜೆಟ್ ಬೆಳಿಗ್ಗೆ 11 ಗಂಟೆಗೆ ಮಂಡನೆಯಾಗಲಿದೆ. ಪಾಲಿಕೆಯ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಗುಣಶೇಖರ್ ಹುಟ್ಟು ಹಬ್ಬದಂದೇ ಪಾಲಿಕೆ ಬಜೆಟ್ ನ್ನು ಗುಣಶೇಖರ್ ಅವರೇ ಮಂಡಿಸಲಿದ್ದಾರೆ. ನಿರೀಕ್ಷೆಯಂತೆ ಬಜೆಟ್ ಗಾತ್ರ 10 ಸಾವಿರ ಕೋಟಿ ಮೀರಲ್ಲ.. ಜೊತೆಗೆ ರಾಜ್ಯ ಸರ್ಕಾರ 2500 ಕೋಟಿ ಅನುದಾನವನ್ನ ಪಾಲಿಕೆಗೆ ನೀಡಿದೆ. ಈ ಅನುದಾನವನ್ನು ಬಜೆಟ್ ಗೆ ಸೇರಿಸಿಕೊಳ್ಳುವ ಯೋಚನೆ ಪಾಲಿಕೆಗೆ ಇದೆ.
-ಪ್ರತಿ ವಾರ್ಡ್ನಲ್ಲಿ 50 ಸೈಕಲ್ ವಿತರಣೆ ಗುರಿ
-ಪ್ರತಿ ವಾರ್ಡ್ ಗೆ 40 ಹೊಲಿಗೆ ಯಂತ್ರ ವಿತರಿಸಲು ತೀರ್ಮಾನ
-ರುದ್ರಭೂಮಿಗಳಿಗೆ ಹೆಚ್ಚಿನ ಒತ್ತು
-ಮಹಿಳಾ ಪಾಲಿಕೆ ಸದಸ್ಯರಿಗೆ 25 ಲಕ್ಷ ರೂ. ಅನುದಾನ
-ಪಾಲಿಕೆ ವತಿಯಿಂದ ಸುವರ್ಣಸೌಧ ನಿರ್ಮಾಣ ಸಾಧ್ಯತೆ
-ಹಸಿರೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯ
-ಬಜೆಟ್ ಗಾತ್ರ 11 ರಿಂದ 12 ಸಾವಿರ ಕೋಟಿ ಸಾಧ್ಯತೆ
ಒಟ್ಟಿನಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮಿಶ್ರ ಸರ್ಕಾರವಿರುವ ಪಾಲಿಕೆ ಬಜೆಟ್ ಬಿಜೆಪಿಗೆ ಒಪ್ಪಿಗೆಯಾಗುತ್ತಾ ? ಇಲ್ಲ ಗಲಾಟೆ ಆಗುತ್ತಾ? ಬದಲಾಗಿ ಜೆಡಿಎಸ್ ಬೇಡಿಕೆಗಳಿಗೆ ಮಣೆ ಹಾಕದೇ ಗದ್ದಲದಲ್ಲಿ ಬಜೆಟ್ ಅಂತ್ಯವಾಗುತ್ತಾ? ಈ ಎಲ್ಲ ಕುತೂಹಲ ನಡುವೆ ತೆರಿಗೆ ಹೊರೆ ಇಲ್ಲದಿದ್ರೆ ಜನಸಾಮಾನ್ಯ ಖುಷಿಯಾಗಿರುವುದು ಖಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.