ಕಾವೇರಿ ನೀರಿಗೆ ತಮಿಳು ನಾಡು ಮತ್ತೆ ಕ್ಯಾತೆ

By Suvarna Web DeskFirst Published Feb 17, 2017, 5:17 AM IST
Highlights

ಇನ್ನುದೆಹಲಿಯಶ್ರಮಶಕ್ತಿಭವನದಲ್ಲಿನಡೆದಮೇಲುಸ್ತುವಾರಿಸಭೆಯಲ್ಲಿಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳದ4 ರಾಜ್ಯಗಳಕಾರ್ಯದರ್ಶಿಗಳುಭಾಗಿಯಾಗಿದ್ದರು

ನವದೆಹಲಿ(ಫೆ.17): ಕಾವೇರಿ ಮೇಲುಸ್ತುವರಿ ಸಮಿತಿ ಸಭೆ ಅಂತ್ಯವಾಗಿದ್ದು. ಮತ್ತೆ ತಮಿಳುನಾಡು ಮೇಲುಸ್ತುವಾರಿ ಸಬೆಯಲ್ಲಿ ತಕರಾರು ಎತ್ತಿದೆ. ಬಾಕಿ ಉಳಿದ ಕಾವೇರಿ ನದಿ ನೀರನ್ನ ಬಿಡುವಂತೆ ಪಟ್ಟು ಹಿಡದಿದ್ದು  ಮೇಲುಸ್ತುವಾರಿ ಸಮಿತಿಯಲ್ಲಿ ತಮಿಳುನಾಡು ಈ ತಕರಾರು ಸಲ್ಲಿಸಿದೆ.

ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ನೀರಿನ ಕೊರತೆ ಇದೆ ಹಾಗಾಗಿ ಸಧ್ಯದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀರು ಹರಿಸಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಬೇಡಿಕೆಯನ್ನು ಕರ್ನಾಟಕದ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಇನ್ನು ದೆಹಲಿಯ ಶ್ರಮಶಕ್ತಿ ಭವನದಲ್ಲಿ ನಡೆದ ಮೇಲುಸ್ತುವಾರಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳದ 4 ರಾಜ್ಯಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದರು ಕರ್ನಾಟಕ ಪರ ಮುಖ್ಯಕಾರ್ಯದರ್ಶಿ ಸುಭಾಷ್​ಚಂದ್ರ ಕುಂಟಿಯಾ ಭಾಗಿಯಾಗಿದ್ದರು

click me!