
ಬೆಂಗಳೂರು(ಮೇ.23): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣವನ್ನ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಲು ನಿರ್ಧಾರ ಮಾಡಿದೆ. ಈ ಬೆಳವಣಿಗೆ ನಡೆಯುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕಟ ಶುರುವಾದಂತಿದೆ
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಕುರಿತಂತೆ ದಿನೇ ದಿನೇ ಸಾಕಷ್ಟು ಅನುಮಾನಗಳು ಹೆಚ್ಚಾಗ್ತೀವೆ. ಕರ್ನಾಟಕ ರಾಜ್ಯ ಸರ್ಕಾರದ ಭಾರೀ ಹಗರಣವೊಂದನ್ನು ಬಯಲಿಗೆಳೆಯೋ ಸಾಹಸದಲ್ಲಿ ತಿವಾರಿ ಕೊಲೆಯಾಗಿದ್ದಾರಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಹೀಗಾಗಿ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದೆ.
ಅನುರಾಗ್ ತಿವಾರಿ ಕೇಸನ್ನು ಯುಪಿ ಸರ್ಕಾರ ಸಿಬಿಐ ಗೆ ವಹಿಸಲು ನಿರ್ಧಾರ ಮಾಡ್ತಿದ್ದಂತೆ ಸಿದ್ದು ಸರ್ಕಾರಕ್ಕೆ ನಡುಕ ಶುರುವಾಗಿದೆ. ಬಿಪಿಎಲ್ ಫಲಾನುಭವಿಗಳ ಆಯ್ಕೆಯಲ್ಲಿ ನಡೆದ 150 ಕೋಟಿ ಗೋಲ್ಮಾಲ್ ಹಗರಣವನ್ನ ಬಯಲಿಗೆಳೆಯಲು ಅನುರಾಗ್ ತಿವಾರಿ ಸಜ್ಜಾಗಿದ್ರಂತೆ. ಆಕ್ರಮದ ಕುರಿತು ವಿಧಾನಸಭೆ ಅರ್ಜಿಗಳ ಸಮಿತಿಗೆ ವರದಿ ಸಲ್ಲಿಸಲು ಕೂಡ ಅನುರಾಗ್ ತಿವಾರಿ ತಯಾರಾಗಿದ್ರು ಅನ್ನೋ ಮಾಹಿತಿ ದಾಖಲೆಗಳಿಂದ ತಿಳಿದುಬಂದಿದೆ. ಹಗರಣ ಬಯಲಿಗೆಳೆದ್ರೆ ನಮ್ಮ ಬಣ್ಣ ಬಯಲಾಗುತ್ತೇ ಅಂಥ ಅನುರಾಗ್ ತಿವಾರಿಯನ್ನ ಕೋಲೆ ಮಾಡಿಲಾಗಿದೆ ಎಂಬ ಅನುಮಾನ ದಟ್ಟವಾಗಿ ಕೇಳಿ ಬರುತ್ತಿದೆ.
ಇನ್ನು ತಿವಾರಿ ನಿಗೂಢ ಸಾವಿನ ಸಂಬಂಧ ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ಉತ್ತರಪ್ರದೇಶದ ಮುಖ್ಯಕಾರ್ಯದರ್ಶಿಗೆ 8 ಪುಟಗಳ ಪತ್ರ ಬರೆದಿದ್ದಾರೆ. ಅನುರಾಗ್ ತಿವಾರಿಯ ನಿಗೂಢ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡವಿದೆ. ಸಿಬಿಐಗೆ ವಹಿಸಿದ ಮಾತ್ರಕ್ಕೆ ಅನುರಾಗ್ ತಿವಾರಿಯ ಸಾವಿಗೆ ನ್ಯಾಯ ಸಿಗೋದು ಅನುಮಾನವಾಗಿದೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಒಟ್ಟಿನಲ್ಲಿ ಅನುರಾಗ್ ತಿವಾರಿಯ ಕೇಸ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿದೆ. ತಿವಾರಿಯ ನಿಗೂಢ ಸಾವಿನ ರಹಸ್ಯ ತಿಳಿಯಲು ಸಿಬಿಐ ತನಿಖೆ ಮುಗಿಯುವವರೆಗೂ ಕಾಯಲೇಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.