ಈಕೆ ಜಾತಿ, ಧರ್ಮ ಇಲ್ಲದ ದೇಶದ ಮೊದಲ ಮಹಿಳೆ!

Published : Feb 15, 2019, 10:15 AM IST
ಈಕೆ ಜಾತಿ, ಧರ್ಮ ಇಲ್ಲದ ದೇಶದ ಮೊದಲ ಮಹಿಳೆ!

ಸಾರಾಂಶ

ಜಾತಿ ಹಾಗೂ ಧರ್ಮದ ಹೆಸರನ್ನು ಬರೆಯಲು ನಿರಾಕರಿಸುತ್ತಲೇ ಬಂದಿದ್ದ ತಮಿಳುನಾಡಿನ ಮಹಿಳೆಯೊಬ್ಬರು ತಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರು ಅಲ್ಲ ಎಂಬ ಪ್ರಮಾಣಪತ್ರವನ್ನು ಸರ್ಕಾರದಿಂದ ಅಧಿಕೃತವಾಗಿ ಪಡೆದುಕೊಂಡಿದ್ದಾರೆ.

ತಿರುಪತ್ತೂರು[ಫೆ.15]: ಯಾವುದೇ ಸರ್ಕಾರಿ ದಾಖಲೆಗಳಲ್ಲೂ ತನ್ನ ಜಾತಿ ಹಾಗೂ ಧರ್ಮದ ಹೆಸರನ್ನು ಬರೆಯಲು ನಿರಾಕರಿಸುತ್ತಲೇ ಬಂದಿದ್ದ ತಮಿಳುನಾಡಿನ ಮಹಿಳೆಯೊಬ್ಬರು ತಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರು ಅಲ್ಲ ಎಂಬ ಪ್ರಮಾಣಪತ್ರವನ್ನು ಸರ್ಕಾರದಿಂದ ಅಧಿಕೃತವಾಗಿ ಪಡೆದುಕೊಂಡಿದ್ದಾರೆ. ತನ್ಮೂಲಕ ಇಂತಹ ಪ್ರಯತ್ನದಲ್ಲಿ ಸಫಲರಾದ ಮೊದಲಿಗರು ಎನ್ನಿಸಿಕೊಂಡಿದ್ದಾರೆ.

ತಿರುಪತ್ತೂರಿನಲ್ಲಿ ವಕೀಲರಾಗಿರುವ 35 ವರ್ಷದ ಎಂ.ಎ. ಸ್ನೇಹಾ ಅವರಿಗೆ ಫೆ.5ರಂದು ತಮಿಳುನಾಡು ಸರ್ಕಾರದ ಪರವಾಗಿ ತಹಸೀಲ್ದಾರ್‌ ಟಿ.ಎಸ್‌. ಸತ್ಯಮೂರ್ತಿ ಅವರು ‘ಯಾವುದೇ ಜಾತಿ, ಧರ್ಮಕ್ಕೆ ಸೇರಿದವರು ಇವರಲ್ಲ’ ಎಂಬ ಪ್ರಮಾಣಪತ್ರವನ್ನು ಕೊಟ್ಟಿದ್ದಾರೆ.

ಸ್ನೇಹ ಅವರ ಕುಟುಂಬ ಜಾತಿ ಅಥವಾ ಧರ್ಮದಲ್ಲಿ ಯಾವತ್ತಿಗೂ ನಂಬಿಕೆ ಇಟ್ಟಿರಲಿಲ್ಲ. ಸ್ನೇಹ ಅವರ ಜನನ ಪ್ರಮಾಣ ಪತ್ರ, ಶಾಲಾ ಪ್ರಮಾಣಪತ್ರ ಸೇರಿದಂತೆ ಎಲ್ಲ ದಾಖಲೆಗಳಲ್ಲೂ ಜಾತಿ ಹಾಗೂ ಧರ್ಮದ ಕಾಲಂ ಮುಂದೆ ಖಾಲಿ ಬಿಡಲಾಗಿದೆ. ಇದಕ್ಕೆ ಅಧಿಕೃತವಾಗಿ ಪ್ರಮಾಣಪತ್ರ ಪಡೆದುಕೊಳ್ಳಲು 2010ರಿಂದಲೂ ಅವರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಆರಂಭದಲ್ಲಿ ತಿರಸ್ಕರಿಸಿದ್ದ ಅಧಿಕಾರಿಗಳು, ಕೊನೆಗೆ ಕೊಟ್ಟಿದ್ದಾರೆ.

ಸ್ನೇಹ ಅವರ ಪತಿ ಪಾರ್ಥಿಬ ರಾಜ ಅವರು ತಮಿಳು ಪ್ರಾಧ್ಯಾಪಕರಾಗಿದ್ದಾರೆ. ಈ ದಂಪತಿಗೆ ಮೂವರು ಪುತ್ರಿಯರು ಇದ್ದು, ಅವರ ಎಲ್ಲ ದಾಖಲೆಗಳಲ್ಲೂ ಜಾತಿ, ಧರ್ಮದ ಕಾಲಂ ಅನ್ನು ಖಾಲಿ ಬಿಡುತ್ತಾ ಬಂದಿದ್ದಾರೆ. ಮೂವರೂ ಮಕ್ಕಳಿಗೆ ಎರಡು ಧರ್ಮಗಳು ಸಮ್ಮಿಳಿತಗೊಂಡಿರುವ ಹೆಸರುಗಳಾದ ಆಧಿರೈ ನಸ್ರೀನ್‌, ಆಧಿಲಾ ಐರಿನ್‌ ಹಾಗೂ ಆರೀಫಾ ಜೆಸ್ಸಿ ಎಂದು ಹೆಸರಿಟ್ಟಿದ್ದಾರೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana;
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​