Valentine's Dayಯಂದು ರಾಹುಲ್‌ಗೆ ವೇದಿಕೆಯಲ್ಲೇ ಮುತ್ತಿಕ್ಕಿದ್ದ ಮಹಿಳೆ

Published : Feb 15, 2019, 09:49 AM IST
Valentine's Dayಯಂದು ರಾಹುಲ್‌ಗೆ ವೇದಿಕೆಯಲ್ಲೇ ಮುತ್ತಿಕ್ಕಿದ್ದ ಮಹಿಳೆ

ಸಾರಾಂಶ

ವ್ಯಾಲಂಟೈನ್ಸ್‌ ದಿನವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೆನ್ನೆಗೆ ಮಹಿಳೆಯೊಬ್ಬರು ಮುತ್ತಿಕ್ಕಿದ ಘಟನೆ ನಡೆದಿದೆ.

ಧರ್ಮಪುರ್‌[ಫೆ.15]: ಮಹಿಳೆಯೊಬ್ಬರು, ವ್ಯಾಲಂಟೈನ್ಸ್‌ ದಿನವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೆನ್ನೆಗೆ ಮುತ್ತಿಕ್ಕಿದ ಅಚ್ಚರಿಯ ಘಟನೆ ಗುರುವಾರ ಇಲ್ಲಿ ನಡೆದಿದೆ. ವಲ್ಸದ್‌ನಲ್ಲಿ ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದ ರಾಹುಲ್‌ ವೇದಿಕೆ ಏರಿದ್ದರು.

ರಾಹುಲ್‌ ಭಾಷಣಕ್ಕೂ ಮುನ್ನ ಅವರಿಗೆ ಹಾರ ಹಾಕಲು ವೇದಿಕೆ ಏರಿದ ಮಹಿಳೆಯೊಬ್ಬರ ಗುಂಪಿನಲ್ಲಿದ್ದ ಕ್ಷಮೀರಾಬೆನ್‌ (60) ಏಕಾಏಕಿ ರಾಹುಲ್‌ ಕೆನ್ನೆಗೆ ಮುತ್ತಿಕ್ಕಿದ್ದರು. ಘಟನೆಯಿಂದ ಕ್ಷಣಕಾಲ ರಾಹುಲ್‌ ತಬ್ಬಿಬ್ಬಾದರು.

ಬಳಿಕ ತಮ್ಮ ಮುತ್ತಿನ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಬೆನ್‌, ಇದೇನು ಪೂರ್ವಯೋಜಿತವಲ್ಲ. ಆ ತಕ್ಷಣಕ್ಕೆ ಮನಸ್ಸಿನಲ್ಲಿ ಹೊಳೆದಂತೆ ನಡೆದುಕೊಂಡಿದ್ದೇನೆ. ನಾನು 48 ವರ್ಷಗಳಿಂದ ಕಾಂಗ್ರೆಸ್‌ ಕಾರ್ಯಕರ್ತೆ. ರಾಹುಲ್‌ ಅವರ ಏಳಿಗೆಯನ್ನು ಬಯಸುವವರಲ್ಲಿ ನಾನೂ ಕೂಡಾ ಒಬ್ಬಳು. ರಾಹುಲ್‌ ನನ್ನ ಸೋದರನಿದ್ದಂತೆ ಎಂದು ಸ್ಪಷ್ಟನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?