
ರಾಮನಗರ[ನ.01] ರಾಮನಗರ ಉಪಚುನಾವಣಾ ಅಖಾಡದಿಂದ ಬಿಜೆಪಿ ಅಭ್ಯರ್ಥಿ ಹಿಂದೆ ಸರಿಯಲು ಕಾರಣವೇನು? ಈ ಕಾರಣ ಏನು ಎಂಬ ಉತ್ತರ ರಾಮನಗರದ ಹಳ್ಳಿ ಕಟ್ಟೆ ಮೇಲೆ ಚರ್ಚೆಯಾಗುತ್ತಿದೆ.
ಚಂದ್ರಶೇಖರ್ ತಾವು ಕಾಂಗ್ರೆಸ್ ಮನೆ ಸೇರಿದ್ದೇನೆ ಎಂದಿದ್ದಾರೆ. ಬಿಜೆಪಿ ಹಿರಿಯ ನಾಯಕರು ಚಂದ್ರಶೇಖರ್ ವಿರುದ್ಧ ಅಸಮಧಾನ ಹೊರಹಾಕುತ್ತಿದ್ದಾರೆ. ಆದರೆ ಜನರ ಬಾಯಲ್ಲಿ ಹರಿದಾಡುತ್ತಿರುವ ಕತೆ ಈ ಎಲ್ಲ ರಾಜಕಾರಣದ ಅಂಶಗಳನ್ನು ಮೀರಿ ನಿಲ್ಲುತ್ತದೆ. ಈ ಕತೆಯನ್ನು ನೀವು ಕೇಳಲೇಬೇಕು.
ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಸಿಡಿಸಿದ ಹೊಸ ಬಾಂಬ್
ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಬಿಜೆಪಿ ಮೊದಲು ಸಿಪಿ ಯೋಗೇಶ್ವರ ಅವರನ್ನು ಚುನಾವಣೆಗೆ ನಿಲ್ಲಲು ಕೇಳಿಕೊಂಡಿತ್ತು. ಆದರೆ ಯೋಗೇಶ್ವರ ಉಪ ಚುನಾವಣೆ ಸಹವಾಸ ಬೇಡ ಅಂದ್ರು.. ಅಂತೂ ಇಂತೂ ಚಂದ್ರಶೇಖರ್ ಎಂಬುವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ನನ್ನ ಬಳಿ ಇರುವುದು ಒಂದಿಷ್ಟು ಹಣ ಇದು ಖರ್ಚಾದರೆ ಮುಂದೆ ಚುನಾವಣೆಗೆ ಸಮಯದಲ್ಲಿ ನೀವು ಸಹಕಾರ ನೀಡಬೇಕು ಎಂದು ಬಿಜೆಪಿ ನಾಯಕರ ಬಳಿ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು.
ಬಿಜೆಪಿ ನಾಯಕರು ಮಾತಿನಂತೆ ಒಂದಿಷ್ಟು ಹಣ ಖರ್ಚಿಗೆ ಕೊಟ್ಟಿದ್ದಾರೆ. ಆದರೆ ಚಂದ್ರಶೇಖರ್ ಬದಲು ಉಸ್ತುವಾರಿ ವಹಿಸಿಕೊಂಡಿದ್ದ ಒಬ್ಬರ ಕೈಗೆ ಕೊಟ್ಟಿದ್ದಾರೆ. ಹಣ ಸಿಕ್ಕ ನಂತರ ಬಿಜೆಪಿಯ ಆಪರೇಶನ್ ನಾಯಕ ತಮ್ಮ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.ಗಲಿಬಿಲಿಗೊಳಗಾದ ಚಂದ್ರಶೇಖರ್ ಹಿರಿಯ ನಾಯಕರಿಗೆ ದುಂಬಾಲು ತಲುಪಿಸುವ ಯತ್ನ ಮಾಡಿದ್ದಾರೆ. ಆದರೆ ಬಳ್ಳಾರಿ-ಶಿವಮೊಗ್ಗದಲ್ಲಿ ಬ್ಯುಸಿಯಾಗಿದ್ದ ಹಿರಿಯರಿಗೆ ಕೂಗು ಕೇಳಿಲ್ಲ
ಇನ್ನೇನು ಮಾಡೋದು ಕೈಯಲಿದ್ದದ್ದು ಖಾಲಿ ಆಯ್ತು.. ಖರ್ಚಿಗೂ ಸಿಗ್ತಿಲ್ಲ..ನಾಯಕರ ಸಪೋರ್ಟ್ ಸಹ ಇಲ್ಲ ಎಂದು ಚಂದ್ರಶೇಖರ್ ಅಲವತ್ತುಕೊಳ್ಳುತ್ತಿರುವುದು ಡಿಕೆಶಿ ಪಾಳಯಕ್ಕೆ ಕೇಳಿದೆ. ತಕ್ಷಣ ಬೆಂಬಲಿಗರ ಮೂಲಕ ಚಂದ್ರಶೇಖರ್ ಗೆ ಕರೆಬಂದಿದೆ. ಬೆಳಗಾಗುವುದರೊಳಗೆ ಬಿಜೆಪಿ ಕ್ಯಾಂಡಿಡೇಟ್ ಆಪರೇಶನ್ ಆಗಿಹೋಗಿದೆ...ಕೈ ಖಾಲಿ ಮಾಡಿಕೊಂಡಿದ್ದ ಚಂದ್ರಶೇಖರ್ ಜೇಬು ಒಂಚೂರು ಭರ್ತಿಯಾಗಿದೆ ಎಂದು ರಾಮನಗರದ ಹಳ್ಳಿ ಕಟ್ಟೆಯಲ್ಲಿ ಮಾತಾಡ್ತಾ ಇರೋದನ್ನು ಕೇಳಿಯೂ ಕೇಳಿಸದಂತೆ ಮತದಾರರು ಹೆಜ್ಜೆ ಹಾಕಿದ್ದು ಮಾತ್ರ ಸತ್ಯ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.