ಕಟಕಟೆಯಲ್ಲಿ ಕಾವೇರಿ: ವಿವಾದ ಆರಂಭವಾದ ಬಳಿಕ ಏನೇನಾಯ್ತು?

By Internet DeskFirst Published Sep 27, 2016, 7:59 AM IST
Highlights

ಬೆಂಗಳೂರು(ಸೆ.27): ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗುತ್ತಿದೆ. ಇಂದು ಸುಪ್ರೀಂಕೋರ್ಟ್​ನಲ್ಲೂ ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಾಲಯದ ತೀರ್ಪು ಏನಿರಬಹುದು ಗೊತ್ತಿಲ್ಲ, ಆದರೆ ಸೆ.5ರಿಂದ ಇದುವರೆಗೂ ಏನೇನಾಯಿತು? ಈ ಕುರಿತಾದ ಡಿಟೇಲ್ಸ್

-ಸೆಪ್ಟೆಂಬರ್ 5
ತಮಿಳುನಾಡಿಗೆ 13 ಟಿಎಂಸಿ ನೀರು ಹರಿಸಲು ಆದೇಶ. 10 ದಿನಗಳ ಕಾಲ ಪ್ರತಿದಿನ 15 ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶ.

Latest Videos

-ಸೆಪ್ಟೆಂಬರ್ 6
ಮಂಡ್ಯದಲ್ಲಿ ಭುಗಿಲೆದ್ದ ರೈತರ ಆಕ್ರೋಶ. ಪ್ರತಿಭಟನೆ. 2 ದಿನ ಮಂಡ್ಯ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

-ಸೆಪ್ಟೆಂಬರ್ 7
ಮಂಡ್ಯದ ಕೃಷಿ ಭೂಮಿಗೂ ನೀರು ಹರಿಸಲು ಸರ್ಕಾರ ನಿರ್ಧಾರ.  2.92 ಲಕ್ಷ ಎಕರೆ ಬೆಳಗೆ ನೀರು ಒದಗಿಸಲು ಸಿಎಂ ಒಪ್ಪಿಗೆ

-ಸೆಪ್ಟೆಂಬರ್ 8
ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಭಾರಿ ಪ್ರತಿಭಟನೆ. ಪ್ರತಿಭಟನೆ ನಡುವೆಯೂ ನೀರು ಬಿಟ್ಟ ಸರ್ಕಾರ

-ಸೆಪ್ಟೆಂಬರ್ 9
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ಬಂದ್

-ಸೆಪ್ಟೆಂಬರ್​ 11
ತಮಿಳುನಾಡಿನಲ್ಲಿ ಕರ್ನಾಟಕದ ಉದ್ಯಮಿಗಳ ಹೋಟೆಲ್ಗಳ ಮೇಲೆ ದಾಳಿ. ಕನ್ನಡಿಗರ ಮೇಲೆ ಹಲ್ಲೆ

-ಸೆಪ್ಟೆಂಬರ್ 12
ಸುಪ್ರೀಂಕೋರ್ಟ್ನಲ್ಲಿ ರಾಜ್ಯಕ್ಕೆ ಮತ್ತೆ ಹೆಚ್ಚುವರಿ ನೀರು ಹರಿಸುವ ಆದೇಶ. ಸೆ.20ರವರೆಗೂ ಪ್ರತಿದಿನ 12 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ. ನೀರಿನ ಪ್ರಮಾಣ ಕಡಿಮೆ ಮಾಡಿ, ದಿನಗಳ ಅವಧಿ ಹೆಚ್ಚಿಸಿದ ಸುಪ್ರೀಂಕೋರ್ಟ್.
ಸುಪ್ರೀಂಕೋರ್ಟ್ ಆದೇಶದಿಂದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರು. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ. ಬೆಂಗಳೂರಿನಲ್ಲಿ ಕರ್ಫ್ಯೂ ಜಾರಿ. ಗೋಲಿಬಾರ್ನಲ್ಲಿ ಇಬ್ಬರು ಸಾವು.

-ಸೆಪ್ಟೆಂಬರ್​ 13
ಕರ್ಫ್ಯೂ, ನಿಷೇದಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಹಿಂಸಾಚಾರ ನಡೆಯಲಿಲ್ಲ. ಕರ್ನಾಟಕದಲ್ಲಿ ಅಘೋಷಿತ ಬಂದ್ ವಾತಾವರಣ

-ಸೆಪ್ಟೆಂಬರ್ 14
ದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ. ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದಲ್ಲಿ ಸಭೆ. ನಾಲ್ಕೂ ರಾಜ್ಯಗಳಿಂದ ನೀರಿನ ಮಾಹಿತಿ ಸಂಗ್ರಹ

-ಸೆಪ್ಟೆಂಬರ್ 15
ಸುಪ್ರೀಂಕೋರ್ಟ್ನಲ್ಲಿ ಏನು ಮಾಡಬೇಕು..? ಬೆಂಗಳೂರಿನಲ್ಲಿ ಕಾನೂನು ತಜ್ಞರೊಂದಿಗೆ ಸಿಎಂ ಸಮಾಲೋಚನೆ

-ಸೆಪ್ಟೆಂಬರ್ 16
ಕರ್ನಾಟಕದಿಂದ ನೀರು ಬಿಟ್ಟ ನಂತರವೂ, ತಮಿಳುನಾಡಿನಲ್ಲಿ ಬಂದ್.

-ಸೆಪ್ಟೆಂಬರ್ 17
ದೆಹಲಿಯಲ್ಲಿ ನಾರಿಮನ್ ತಂಡದೊಂದಿಗೆ ಸಚಿವ ಎಂ.ಬಿ. ಪಾಟೀಲ್ ಮಹತ್ವದ ಸಭೆ. ಕಾವೇರಿ ಕೊಳ್ಳದಲ್ಲಿ ಮುಂದುವರಿದ ಪ್ರತಿಭಟನೆ

-ಸೆಪ್ಟೆಂಬರ್ 18
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ. ರೈತರ ಹೊಲ, ಗದ್ದೆಗಳಿಗೆ ನೀರು ಬಂದ್.

-ಸೆಪ್ಟೆಂಬರ್ 19
ದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಭೆ. ಕರ್ನಾಟಕಕ್ಕೆ ಮತ್ತೆ ಬರಸಿಡಿಸಲು. ಮತ್ತೆ ತಮಿಳುನಾಡಿಗೆ 10 ದಿನ ಮೂರು ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶ.

-ಸೆಪ್ಟೆಂಬರ್ 20
ಸುಪ್ರೀಂಕೋರ್ಟ್ನಲ್ಲಿ ಕೈತಪ್ಪಿದಳು ಕಾವೇರಿ. 10 ದಿನಗಳ ಕಾಲ 6 ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶ. 3.8 ಟಿಎಂಸಿ ನೀರು ಬಿಡಲು ಸೂಚನೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ 4 ವಾರ ಗಡುವು.

ಸುಪ್ರೀಂಕೋರ್ಟ್ ಆದೇಶದ ವಿರುದ್ಧ ತಿರುಗಿಬಿದ್ದ ಕಾವೇರಿ ಕೊಳ್ಳದ ರೈತರು. ಮಂಡ್ಯ ಭಾಗದ ಶಾಸಕರಿಂದ ರಾಜೀನಾಮೆ ಎಚ್ಚರಿಕೆ

-ಸೆಪ್ಟೆಂಬರ್ 21
ಕಾವೇರಿ ತೀರ್ಪು ಕುರಿತಂತೆ ಸರ್ವಪಕ್ಷ ಸಭೆ. ದೇವೇಗೌಡರ ಮನೆಗೆ ತೆರಳಿದ ಸಿದ್ದರಾಮಯ್ಯ. ಸರ್ವಪಕ್ಷ ಸಭೆಗೆ ಬಿಜೆಪಿ ಗೈರು. ತುರ್ತು ಸಂಪುಟ ಸಭೆಯಲ್ಲಿ ನೀರು ಬಿಡುಗಡೆ ಮುಂದೂಡಲು ನಿರ್ಧಾರ. ಸೆ.23ರಂದು ವಿಶೇಷ ಅಧಿವೇಶನ ಕರೆದ ಸರ್ಕಾರ

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಅನಂತ್ ಕುಮಾರ್, ಡಿ.ವಿ. ಸದಾನಂದ ಗೌಡ ಮಾತುಕತೆ. ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಭಾರತಿಗೆ ಕಾವೇರಿ ಸಂಕಷ್ಟದ ವಿವರಣೆ

-ಸೆಪ್ಟೆಂಬರ್ 22
ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ. ಉಮಾಭಾರತಿ ಜೊತೆ ಭೇಟಿ. ಕಾವೇರಿ ನಿಯಂತ್ರಣ ಮಂಡಳಿ ರಚನೆ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಮನವಿ. ಮಂಡ್ಯದಲ್ಲಿ ಅಸಹಾಕಾರ ಚಳವಳಿ ಆರಂಭ

-ಸೆಪ್ಟೆಂಬರ್ 23
ವಿಶೇಷ ಅಧಿವೇಶನದಲ್ಲಿ ಕುಡಿಯಲಷ್ಟೇ ನೀರು ಬಳಸಲು ನಿರ್ಣಯ ಅಂಗೀಕರಿಸಿದ ಸರ್ಕಾರ. ಸರ್ವಾನುಮತದಿಂದ ನಿರ್ಣಯ ಅನುಮೋದನೆ

-ಸೆಪ್ಟೆಂಬರ್ 25
ಕಾವೇರಿ ಭಾಗದ ರೈತರಿಗೆ ಸಾಲ ಮರುಪಾವತಿ ಅವಧಿ ವಿಸ್ತರಿಸಿ. ಸರ್ಕಾರಕ್ಕೆ ಸಚಿವರಿಂದಲೇ ಸಲಹೆ

-ಸೆಪ್ಟೆಂಬರ್ 26
ಸುಪ್ರೀಂಕೋರ್ಟ್ತೀರ್ಪು ಮರುಪರಿಶೀಲನೆಗೆ ಕರ್ನಾಟಕ ಮೇಲ್ಮನವಿ. ಸದನದ ನಿರ್ಣಯವನ್ನೂ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ವಕೀಲರು

-ಸೆಪ್ಟೆಂಬರ್ 26
ನೀರು ಬಿಡುವವರೆಗೆ ಕರ್ನಾಟಕದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಬೇಡಿ. ಕರ್ನಾಟಕದ ಅರ್ಜಿಗೆ ತಮಿಳುನಾಡು ತಕರಾರು ಅರ್ಜಿ

click me!