70ನೇ ಸ್ವಾತಂತ್ರ್ಯೋತ್ಸವಕ್ಕೆ ಇನ್ನೊಂದೆ ದಿನ: ಬಿಗಿಭದ್ರತೆ

By Suvarna Web DeskFirst Published Aug 13, 2017, 11:25 PM IST
Highlights

ಆಗಸ್ಟ್ 15, ಪ್ರತಿಯೊಬ್ಬಭಾರತೀಯನೂಸಂಭ್ರಮಪಡುವದಿನ. ಸಿಲಿಕಾನ್ಸಿಟಿಯಲ್ಲೂಸ್ವಾತಂತ್ರ್ಯದಿನಾಚರಣೆಯನ್ನವಿಜೃಂಭಣೆಯಿಂದಆಚರಿಸಲುಸಕಲರೀತಿಯಕಸರತ್ತುನಡೆದಿದೆ. ಪ್ರತಿವರ್ಷದಂತೆನಗರದಮಾಣಿಕ್ಷಾಮೈದಾನದಲ್ಲಿಎಲ್ಲಾವ್ಯವಸ್ಥೆಮಾಡಲಾಗಿದ್ದು, ಇಂದುತಾಲೀಮುನಡೆಸಲಾಯ್ತು.

ಬೆಂಗಳೂರು(ಆ.13): ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಆಚರಣೆಗೆ ಇನ್ನ ಎರಡೇ ದಿನವಿದ್ದು, ಇಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡುವ ವಿದ್ಯಾರ್ಥಿಗಳ ಹಾಗೂ ಯೋಧರ ತಾಲೀಮು ಭರ್ಜರಿಯಾಗಿತ್ತು.

ಆಗಸ್ಟ್ 15, ಪ್ರತಿಯೊಬ್ಬ ಭಾರತೀಯನೂ ಸಂಭ್ರಮ ಪಡುವ ದಿನ. ಸಿಲಿಕಾನ್ ಸಿಟಿಯಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನ ವಿಜೃಂಭಣೆಯಿಂದ ಆಚರಿಸಲು ಸಕಲ ರೀತಿಯ ಕಸರತ್ತು ನಡೆದಿದೆ. ಪ್ರತಿ ವರ್ಷದಂತೆ ನಗರದ ಮಾಣಿಕ್ ಷಾ ಮೈದಾನದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಇಂದು ತಾಲೀಮು ನಡೆಸಲಾಯ್ತು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಶಂಕರ್ ಭಾಗವಹಿಸಿದ್ದರು. ಈ ಬಾರಿಗೆ ಗಣ್ಯರು, ಅತೀಗಣ್ಯರು ಸೇರಿ ಹಲವರಿಗೆ ಸುಮಾರು 12 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.

Latest Videos

ಈ ಬಾರಿಯ ಕಾರ್ಯಕ್ರಮಕ್ಕೆ ಭದ್ರತೆ ಹೆಚ್ಚಿನ ಹೊತ್ತು ನೀಡಲಾಗಿದೆ. ಕಳೆದ ಹಲವು ದಿನಗಳಿಂದ ಮಾಣಿಕ್ ಷಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದಂದು 9 ಡಿಸಿಪಿ, 16 ಎಸಿಪಿಗಳು, 51 ಇನ್ಸ್​ಪೆಕ್ಟರ್, 92 ಸಬ್ ಇನ್ಸ್​ಪೆಕ್ಟರ್, ಮಹಿಳಾ ಪೇದೆಗಳು,  ಮಫ್ತಿ ಪೊಲೀಸರು, ಸೇರಿದಂತೆ 1002 ಜನ ಪೊಲೀಸ್ ಸಿಬ್ಬಂದಿ, 56ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ, 8 ಸಶಸ್ತ್ರ ತುಕಡಿ ನಿಯೋಜಿಸಲಾಗಿದೆ. ಅಲ್ಲದೆ ಈ ಬಾರಿ ಕೇರಳದ ಪೋಲಿಸ್ ತುಕಡಿ ಪರೇಡ್​ನಲ್ಲಿ ಗಮನಸೆಳೆಯಲಿದೆ.

ಇನ್ನು 15 ರಂದು ತಾಲೀಮು ನಡೆಸಲು ಸೇನಾಪಡೆ, ಪೊಲೀಸರ ಪರೇಡ್, ವಿವಿಧ ಶಾಲೆಯ ವಿದ್ಯಾರ್ಥಿಗಳು ಪೇರಡ್ ಪ್ರಾಕ್ಟಿಸ್ ಮಾಡುವ ಮೂಲಕ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಪೊಲೀಸರ ಬುಲೆಟ್ ಸಾಹಸ ಪ್ರದರ್ಶನವಂತೂ ಮಯನವಿರೇಳಿಸುವಂತಿದ್ದರೆ, ಇತ್ತ ಶಾಲಾ ವಿದ್ಯಾರ್ಥಿಗಳ ವಸುದೈವ ಕುಟುಂಬಕಂ, ದೇಶಕ್ಕಾಗಿ ಸೆಣಸಾಡಿ ವೀರ ಮರಣವನ್ನಪ್ಪಿದ ವೀರರ ನೃತ ರೂಪಕಗಳು ಗಮನಸೆಳೆಯಲಿವೆ.

ಇನ್ನು, ಸ್ವಾತಂತ್ರ್ಯೋತ್ಸವದಂದು ತಿಂಡಿತಿನಿಸು, ನೀರಿನ ಬಾಟೆಲ್ ಗಳು, ಮದ್ಯದ ಬಾಟೆಲ್, ಬಣ್ಣದ ದ್ರಾವಣ, ಬ್ಯಾಕ್ ಪ್ಯಾಕ್, ಚೀಲ, ಹೆಲ್ಮೆಟ್ ತರುವುದು ನಿಷೇಧಿಸಲಾಗಿದೆ. ಜತಗೆ ಮಾಣಿಕ್ ಷಾ ಗ್ರೌಂಡ್ ಸುತ್ತಮುತ್ತಲಿನ ರಸ್ತೆಗಳ ಸಂಚಾರದಲ್ಲೂ ಬದಲಾವಣೆಯಾಗಲಿದೆ.

(ಸಾಂದರ್ಭ ಚಿತ್ರ)

click me!