ಕರ್ನಾಟಕ ಕರಾವಳಿಗೆ ಸಾಗರ್ ಚಂಡಮಾರುತ

First Published May 18, 2018, 8:43 AM IST
Highlights

ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ  ಹಾಗೂ ಲಕ್ಷದ್ವೀಪ ದ್ವೀಪ ಸಮೂಹಗಳಿಗೆ ‘ಸಾಗರ್’ ಹೆಸರಿನ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ನವದೆಹಲಿ (ಮೇ 18 ) : ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ  ಹಾಗೂ ಲಕ್ಷದ್ವೀಪ ದ್ವೀಪ ಸಮೂಹಗಳಿಗೆ ‘ಸಾಗರ್’ ಹೆಸರಿನ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ  ಎಚ್ಚರಿಕೆ ನೀಡಿದೆ. 

ಸದ್ಯ ಗಲ್ಫ್ ಏಡನ್ ಕೊಲ್ಲಿಯಲ್ಲಿ ಚಂಡಮಾರುತ ಕೇಂದ್ರೀಕೃತ ವಾಗಿದ್ದು, ಮುಂದಿನ 12  ಗಂಟೆಗಳಲ್ಲಿ ಇನ್ನಷ್ಟು ಚುರುಕುಗೊಂಡು ನೈಋತ್ಯ ದಿಕ್ಕಿನತ್ತ ಮುಖಮಾಡುವ ಸಾಧ್ಯತೆ ಇದೆ.

ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಅರಬ್ಬೀ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ

click me!