
ಚಂಡೀಗಢ: ಸಾಮಾನ್ಯವಾಗಿ ಎಲ್ಲೆಡೆ ಸರ್ಕಾರಿ ಉದ್ಯೋಗಕ್ಕೆ ಡಿಮ್ಯಾಂಡೋ ಡಿಮ್ಯಾಂಡು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ, ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ ಕಾನ್ ಸ್ಟೇಬಲ್ ಹುದ್ದೆಗಳಿಗೆ ಎಂಬಿಎ, ಕಾನೂನು ಪದ ವೀಧರರು, ಎಂ.ಟೆಕ್ ಮತ್ತು ಇತರೆ ಸ್ನಾತಕ್ಕೋತ್ತರ ಪದವಿ ಪೂರೈಸಿದವರು ನೇಮಕವಾಗಿರುವುದೇ ಸಾಕ್ಷಿ. ಒಟ್ಟು 4225 ಮಂದಿ ಕಾನ್‌ಸ್ಟೇಬಲ್‌ಗಳು ಆಯ್ಕೆಯಾಗಿದ್ದಾರೆ.
ಅವರಲ್ಲಿ ಇಬ್ಬರು ಎಂಫಿಲ್, 15 ಮಂದಿ ಎಂ.ಟೆಕ್, 16 ಮಂದಿ ಎಂಸಿಎ, 36 ಮಂದಿ ಎಂಬಿಎ, 38 ಮಂದಿ ಎಂಕಾಮ್, 33 ಮಂದಿ ಎಂಎಸ್‌ಸಿ, 103 ಮಂದಿ ಎಂಎ ಸೇರಿದಂತೆ ಇತರ ಪದವೀಧರರೂ ಸೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.