
ಮುಂಬೈ: ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ನಗರಗಳು ‘ಉಗ್ರವಾದದಿಂದ ಆರ್ಥಿಕತೆಗೆ ಭೀತಿ’ ಜಾಗತಿಕ ಪಟ್ಟಿಯ ಟಾಪ್-10 ನಗರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ಕ್ರಮವಾಗಿ 5, 6 ಹಾಗೂ 7ನೇ ಸ್ಥಾನ ಪಡೆದುಕೊಂಡಿವೆ.
ಲಾಯ್ಡ್ಸ್ ಇಂಡಿಯಾ ಸಿಟಿ ರಿಸ್ಕ್ ಇಂಡೆಕ್ಸ್’ ಈ ಸೂಚ್ಯಂಕವನ್ನು ಅಧ್ಯಯನ ನಡೆಸಿ ಸಿದ್ಧಪಡಿಸಿದೆ. ಭಾರತದ ಆರ್ಥಿಕತೆಯ ಅರ್ಧಕ್ಕಿಂತ ಹೆಚ್ಚು (ಶೇ.58) ಪ್ರಮಾಣವು ಭಯೋತ್ಪಾದನೆ ಹಾಗೂ ಕಲಹಗಳಿಂದ ಅಪಾಯ ಎದುರಿಸುತ್ತಿದೆ. ಇದು ವಾರ್ಷಿಕ 9 ಶತಕೋಟಿ ಡಾಲರ್‌ಗೆ ಸಮ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಲಾಯ್ಡ್ಸ್ ಇಂಡಿಯಾ ಹೇಳಿಕೊಂಡಿದೆ.
279 ವಿಶ್ವ ನಗರಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ ಭಾರತದ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕಾನ್‌ಪುರ, ಕೋಲ್ಕತಾ, ಮುಂಬೈ, ಪುಣೆ ಹಾಗೂ ಸೂರತ್- ಅಧ್ಯಯನಕ್ಕೆ ಒಳಪಟ್ಟ ಭಾರತದ ನಗರಿಗಳು.
ಭಾರತದ ಆರ್ಥಿಕತೆ ಉತ್ತಮವಾಗಿ ಬೆಳವಣಿಗೆ ಆಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಕಲಹಗಳು ಹಾಗೂ ಭಯೋತ್ಪಾದನೆಯು ಇದಕ್ಕೆ ಸವಾಲಾಗಿವೆ. ಇವುಗಳಿಂದ ಆರ್ಥಿಕತೆ ಭೀತಿಯಲ್ಲಿದೆ ಎಂದು ಅಧ್ಯಯನ ಕಳವಳ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.