
ರಾಯ್‌ಪುರ: ಇತ್ತೀಚೆಗಷ್ಟೇ ಮಾಸಿಕ 1.10 ಲಕ್ಷ ರು. ಇದ್ದ ರಾಜ್ಯಪಾಲರ ವೇತನವನ್ನು ಕೇಂದ್ರ ಸರ್ಕಾರ 3.5 ಲಕ್ಷ ರು.ಗೆ ಏರಿಕೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಆದರೆ, ಛತ್ತೀಸ್‌ಗಢದ ರಾಜ್ಯಪಾಲ ಬಾಲರಾಮ್‌ಜಿ ದಾಸ್ ಟಂಡನ್ ಅವರು, ‘ತಮಗೆ ಹೆಚ್ಚಿನ ವೇತನದ ಅಗತ್ಯವಿಲ್ಲ. 2016ರ ಜನವರಿಯಿಂದಲೇ ಜಾರಿಗೆ ಬರುವಂತೆ ರಾಜ್ಯಪಾಲರ ವೇತನವನ್ನು 3.5 ಲಕ್ಷ ರು.ಗೆ ಏರಿಕೆ ಮಾಡಿದ್ದಾಗ್ಯೂ, ತಾವು ಮಾತ್ರ 1.10 ಲಕ್ಷ ರು. ಅನ್ನು ಮಾತ್ರ ತೆಗೆದುಕೊಳ್ಳುವುದಾಗಿ,’ ಹೇಳಿದ್ದಾರೆ.
ಈ ಬಗ್ಗೆ ಕಳೆದ ತಿಂಗಳು ಛತ್ತೀಸ್‌ಗಢದ ಲೆಕ್ಕಪತ್ರ ಪರಿಶೋಧಕ(ಎ.ಜಿ)ಗೆ ಪತ್ರ ಬರೆದಿರುವ ರಾಜ್ಯಪಾಲ ಟಂಡನ್ ಅವರು, ತಾವು ತಿಂಗಳಿಗೆ 1.10 ಲಕ್ಷ ರು. ಅನ್ನು ಮಾತ್ರ ವೇತನವಾಗಿ ಪಡೆಯುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.