ಗೋಲ್ಡ್ ಫ್ಲೇಕ್ ಪ್ಯಾಕ್‌ನಲ್ಲಿ ವಿದೇಶಿ ಸಿಗರೆಟ್ ಇಟ್ಟು ಮಾರಾಟ: ಬಂಧನ

By Web DeskFirst Published Sep 19, 2018, 3:35 PM IST
Highlights

ಅರಸಿಕೆರೆ ತಾಲೂಕಿನ ಅಮ್ಜದ್ ಪಾಷಾ, ಯಶವಂತಪುರದ ಸತೀಶ್ ಕುಮಾರ್, ಮೈಸೂರಿನ ಜಯಂತಿಲಾಲ್ ಬಂಧಿತರಾಗಿದ್ದು, ಆರೋಪಿಗಳಿಂದ 5 ಲಕ್ಷ ಮೌಲ್ಯದ 124 ಬಂಡಲ್ ಗೋಲ್ಡ್ ಫ್ಲೇಕ್ ಸಿಗರೆಟ್ ಜಪ್ತಿ ಮಾಡಲಾಗಿದೆ.

ಬೆಂಗಳೂರು(ಸೆ.19): ಯಶವಂತಪುರ ಸಮೀಪ ಗೋವರ್ಧನ್ ಚಿತ್ರಮಂದಿರದ ಬಸ್ ನಿಲ್ದಾಣದಲ್ಲಿ ವಿದೇಶಿ ಸಿಗರೆಟ್ ಮಾರಾಟಕ್ಕೆ ಯತ್ನಿಸಿದ್ದ ಮೂವರನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅರಸಿಕೆರೆ ತಾಲೂಕಿನ ಅಮ್ಜದ್ ಪಾಷಾ, ಯಶವಂತಪುರದ ಸತೀಶ್ ಕುಮಾರ್, ಮೈಸೂರಿನ ಜಯಂತಿಲಾಲ್ ಬಂಧಿತರಾಗಿದ್ದು, ಆರೋಪಿಗಳಿಂದ 5 ಲಕ್ಷ ಮೌಲ್ಯದ 124 ಬಂಡಲ್ ಗೋಲ್ಡ್ ಫ್ಲೇಕ್ ಸಿಗರೆಟ್ ಜಪ್ತಿ ಮಾಡಲಾಗಿದೆ. ಗೋಲ್ಡ್ ಫ್ಲೇಕ್ ಪ್ಯಾಕ್‌ನಲ್ಲಿ ವಿದೇಶಿ ಸಿಗರೆಟ್ ಇಟ್ಟು ಮಾರಾಟ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಬ್ಯಾಗ್‌ನಲ್ಲಿ ತುಂಬಿಕೊಂಡು ಅಕ್ರಮವಾಗಿ ಸಿಗರೆಟ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಅದರಂತೆ ದಾಳಿ ನಡೆಸಿದಾಗ ಮಾಲಿನ ಸಮೇತ ಅವರು ಸಿಕ್ಕಿಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡಿನ ಮುಬಾರಕ್ ಎಂಬುವರಿಂದ ಸಿಗರೆಟ್ ಖರೀದಿಸಿದ್ದ ಈ ಮೂವರು, ನಗರದಲ್ಲಿ ಅವುಗಳನ್ನು ಮಾರಾಟಕ್ಕೆ ಮುಂದಾಗಿದ್ದರು. ಈ ಸಿಗರೆಟ್ ಪ್ಯಾಕ್‌ಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂಬ ಲೇಬಲ್ ಇಲ್ಲದ ಕಾರಣ 2003ರ ತಂಬಾಕು ಉತ್ಪನ್ನ ಕಾಯ್ಡೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

(ಸಾಂದರ್ಭಿಕ ಚಿತ್ರ)

click me!