ಕಲಾವಿದರನ್ನು ಬೆದರಿಸುವುದು ಹುಸಿ-ರಾಷ್ಟ್ರೀಯವಾದ: ಬೃಂದಾ ಕಾರಟ್

By Web DeskFirst Published Oct 11, 2016, 3:22 AM IST
Highlights

ಪಾಕಿಸ್ತಾನಿ ಕಲಾವಿದರನ್ನು ಬಳಸಿ ಸಿನೆಮಾ ನಿರ್ಮಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ನಿನ್ನೆ ಎಂಎನ್’ಎಸ್, ಖ್ಯಾತ ಹಿಂದಿ ಸಿನೆಮಾ ನಿರ್ಮಾಪಕರಾದ ಮಹೇಶ್ ಭಟ್ ಹಾಗೂ ಕರಣ್ ಜೋಹರ್ ಅವರನ್ನು ಬೆದರಿಸಿತ್ತು.

ನವದೆಹಲಿ (ಅ.11): ಕಲಾವಿದರಿಗೆ ಬೆದರಿಕೆವೊಡ್ಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್’ಎಸ್) ಕ್ರಮವು ‘ಹುಸಿ ರಾಷ್ಟ್ರೀಯವಾದ’ವಾಗಿದೆ ಎಂದು ಕಮ್ಯೂನಿಸ್ಟ್ ಪಕ್ಷದ ನಾಯಕಿ ಬೃಂದಾ ಕಾರಟ್ ಬಣ್ಣಿಸಿದ್ದಾರೆ.

ಪಾಕಿಸ್ತಾನಿ ಕಲಾವಿದರನ್ನು ಬಳಸಿ ಸಿನೆಮಾ ನಿರ್ಮಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ನಿನ್ನೆ ಎಂಎನ್’ಎಸ್, ಖ್ಯಾತ ಹಿಂದಿ ಸಿನೆಮಾ ನಿರ್ಮಾಪಕರಾದ ಮಹೇಶ್ ಭಟ್ ಹಾಗೂ ಕರಣ್ ಜೋಹರ್ ಅವರನ್ನು ಬೆದರಿಸಿತ್ತು.

ಮಹೇಶ್ ಭಟ್ ಹಾಗೂ ಕರಣ್’ರಂತವರು ಸೌಮ್ಯ-ಗುರಿಗಳಾಗಿದ್ದಾರೆ. ಅವರನ್ನು ಬೆದರಿಸುವುದು ಹುಸಿ-ರಾಷ್ಟ್ರೀಯವಾದವಾಗಿದೆ, ಎಂದು ಕಾರಟ್ ಹೇಳಿದ್ದಾರೆ.

ಕಲೆಯು ಜನರನ್ನು ಒಗ್ಗೂಡಿಸುತ್ತದೆ ಎಂದಿರುವ ಕಾರಟ್, ಬೆದರಿಸುವ ಕ್ರಮವು ಭಾರತದ ಹಿತಾಸಕ್ತಿಗೆ ಮಾರಕವಾದದ್ದು; ಅದು ಜಗತ್ತಿನ ಮುಂದೆ ನಮ್ಮ ರಾಜಕೀಯ ಮಟ್ಟವನ್ನು ತೆರೆದಿಡುತ್ತದೆ, ಎಂದು ಹೇಳಿದ್ದಾರೆ.

click me!