ಬೇಗ ಕಾರು ಸರ್ವೀಸ್ ಮಾಡು ಅಂದಿದ್ದಕ್ಕೆ ಕೊಲೆ

Published : Oct 11, 2016, 02:55 AM ISTUpdated : Apr 11, 2018, 12:47 PM IST
ಬೇಗ ಕಾರು ಸರ್ವೀಸ್ ಮಾಡು ಅಂದಿದ್ದಕ್ಕೆ ಕೊಲೆ

ಸಾರಾಂಶ

ಶನಿವಾರ ಸಂತೆಯಲ್ಲಿ ಆಯುಧಪೂಜೆಗೆ ಎಂದು ತನ್ನ ಕಾರನ್ನು ಸರ್ವೀಸ್‌'ಗೆ ಕೊಟ್ಟಿದ್ದ ಸುರೇಶ್ ಎಂಬಾತ ಕೂಡಲೇ ಸರ್ವಿಸ್ ಮಾಡಿಕೊಡು ಅಂತಾ ಕೇಳಿದ್ದಾನೆ. ಕೆಲ ಹೊತ್ತು ಬಿಟ್ಟು ಬರುವಂತೆ ಸರ್ವೀಸ್ ಸೆಂಟರ್ ಮಾಲೀಕ ಅಬ್ದುಲ್ ಹೇಳಿದ್ದ. ಆದರೆ, ಅಂದಾಜು 11ಗಂಟೆಯಾದರೂ ವಾಹನ ಸರ್ವಿಸ್ ಆಗಿರಲಿಲ್ಲ. ಇದರಿಂದ ಕೋಪಗೊಂಡ ಸುರೇಶ್ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಅಬ್ದುಲ್ ತನ್ನ ಮನೆಯಲ್ಲಿದ್ದ ಲೈಸನ್ಸ್ ರಿವಾಲ್ವಾರ್‌'ನಿಂದ ಸುರೇಶ್ ಎದೆ ಮತ್ತು ಬೆನ್ನಿಗೆ ಫೈರ್ ಮಾಡಿದ್ದಾನೆ.

ಮಡಿಕೇರಿ(ಅ.11): ಶನಿವಾರ ಸಂತೆಯಲ್ಲಿ ಆಯುಧಪೂಜೆಗೆ ಎಂದು ತನ್ನ ಕಾರನ್ನು ಸರ್ವೀಸ್‌'ಗೆ ಕೊಟ್ಟಿದ್ದ ಸುರೇಶ್ ಎಂಬಾತ ಕೂಡಲೇ ಸರ್ವಿಸ್ ಮಾಡಿಕೊಡು ಅಂತಾ ಕೇಳಿದ್ದಾನೆ. ಕೆಲ ಹೊತ್ತು ಬಿಟ್ಟು ಬರುವಂತೆ ಸರ್ವೀಸ್ ಸೆಂಟರ್ ಮಾಲೀಕ ಅಬ್ದುಲ್ ಹೇಳಿದ್ದ. ಆದರೆ, ಅಂದಾಜು 11ಗಂಟೆಯಾದರೂ ವಾಹನ ಸರ್ವಿಸ್ ಆಗಿರಲಿಲ್ಲ. ಇದರಿಂದ ಕೋಪಗೊಂಡ ಸುರೇಶ್ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಅಬ್ದುಲ್ ತನ್ನ ಮನೆಯಲ್ಲಿದ್ದ ಲೈಸನ್ಸ್ ರಿವಾಲ್ವಾರ್‌'ನಿಂದ ಸುರೇಶ್ ಎದೆ ಮತ್ತು ಬೆನ್ನಿಗೆ ಫೈರ್ ಮಾಡಿದ್ದಾನೆ.

ಟಿಂಬರ್ ವ್ಯಾಪಾರಿಯಾಗಿದ್ದ ಸುರೇಶ್, ತನ್ನ ಮಗ ಧನು ಜೊತೆ ಬಂದಿದ್ದ. ರಿವಾಲ್ವರ್ ತಂದು ಗುಂಡು ಹಾರಿಸಿದ್ದ ಅಬ್ದುಲ್‌'ಗೆ ಸಹೋದರ ಅಬ್ದುಲ್ ಬಾಷಾ ಕೂಡಾ ಸಹಕರಿಸಿದ್ದನಂತೆ. ಈ ಸುದ್ದಿ ಹಬ್ಬುತ್ತಿದ್ದಂತೆ ಸುರೇಶ್ ಕಡೆಯವರು ರೊಚ್ಚಿಗೆದ್ದು ಅಬ್ದುಲ್ ಮನೆ, ವಾಹನ ಮತ್ತು ಸರ್ವಿಸ್ ಸ್ಟೇಷನ್‌ಗೆ ಬೆಂಕಿ ಹಚ್ಚಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬಾಂಬ್ ಆತಂಕ: ಬೆಂಗಳೂರಿನ ಬಹುತೇಕ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್!
ನೇರವಾಗಿ ಮೆಡಿಕಲ್‌ನಿಂದ ಶೀತ ಕೆಮ್ಮು ಸಿರಪ್ ಖರೀದಿಸುವ ಪದ್ಧತಿಗೆ ಬ್ರೇಕ್, ಇನ್ನು ಮುಂದೆ ಹೊಸ ನಿಯಮ